ಕರ್ನಾಟಕ

karnataka

ETV Bharat / state

2-3 ತಿಂಗಳಲ್ಲಿ ಕೋವಿಡ್​ಗೆ ಲಸಿಕೆ ಲಭ್ಯ.. ವಿಜ್ಞಾನಿ ಪ್ರೊ. ಕೆ ಎಸ್ ರಂಗಪ್ಪ - ಕೋವಿಡ್ ಡೆಂಜರ್ ವೈರಸ್ ಅಲ್ಲ

ಆಕ್ಸ್‌ಫರ್ಡ್​ನಲ್ಲಿ 6000 ದಿಂದ 7000 ವಿಜ್ಞಾನಿಗಳು ಕೋವಿಡ್​​ಗೆ ಲಸಿಕೆ ಕಂಡು ಹಿಡಿಯಲು ಕೆಲಸ ಮಾಡುತ್ತಿದ್ದಾರೆ. 2-3 ತಿಂಗಳಲ್ಲಿ ಲಸಿಕೆ ಬರಬಹುದು. 3 ವಿಧದಲ್ಲಿ ಲಸಿಕೆಗಳ ಪ್ರಯೋಗ ಮಾಡಲಾಗುತ್ತಿದೆ..

ಪ್ರೋ. ಕೆ.ಎಸ್.ರಂಗಪ್ಪ
ಪ್ರೋ. ಕೆ.ಎಸ್.ರಂಗಪ್ಪ

By

Published : Oct 3, 2020, 4:20 PM IST

ಮೈಸೂರು :ಕೋವಿಡ್ ಡೇಂಜರ್ ವೈರಸ್ ಅಲ್ಲ. ಆದರೆ, ಎಚ್ಚರಿಕೆಯಿಂದ ಇರಬೇಕು ಅಷ್ಟೇ.. ಇದಕ್ಕೆ ಇನ್ನು 2-3 ತಿಂಗಳಲ್ಲೇ ಲಸಿಕೆ ಲಭ್ಯವಾಗುತ್ತದೆ ಎಂದು ವಿಜ್ಞಾನಿ ಪ್ರೊ. ಕೆ ಎಸ್ ರಂಗಪ್ಪ ಈಟಿವಿ ಭಾರತ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇಂದು ವಿಜ್ಞಾನ ಭವನದಲ್ಲಿ ಈಟಿವಿ ಭಾರತ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಿಜ್ಞಾನಿ ಪ್ರೊ.ಕೆ ಎಸ್‌ ರಂಗಪ್ಪ, ಕೊರೊನಾ ವೈರಸ್ ಬಗ್ಗೆ ಭಯ ಬೇಡ, ಮಾಸ್ಕ್ ಹಾಗೂ ಒಳ್ಳೆಯ ಸೋಪ್​ನಿಂದ ಕೈ ತೊಳೆದುಕೊಂಡ್ರೆ ಸಾಕು. ಇದು ಸಾರ್ಸ್‌ ಮತ್ತು ಹೆಚ್1ಎನ್1 ವೈರಸ್​ಗೆ ಹೋಲಿಸಿದ್ರೆ ದುರ್ಬಲ ವೈರಸ್ ಎಂದರು.

ಪ್ರೊ ಕೆ ಎಸ್ ರಂಗಪ್ಪ ಈಟಿವಿ ಭಾರತ್​ಗೆ ನೀಡಿದ ವಿಶೇಷ ಸಂದರ್ಶನ

ಆಕ್ಸ್‌ಫರ್ಡ್​ನಲ್ಲಿ 6000 ದಿಂದ 7000 ವಿಜ್ಞಾನಿಗಳು ಕೋವಿಡ್​​ಗೆ ಲಸಿಕೆ ಕಂಡು ಹಿಡಿಯಲು ಕೆಲಸ ಮಾಡುತ್ತಿದ್ದಾರೆ. 2-3 ತಿಂಗಳಲ್ಲಿ ಲಸಿಕೆ ಬರಬಹುದು. 3 ವಿಧದಲ್ಲಿ ಲಸಿಕೆಗಳ ಪ್ರಯೋಗ ಮಾಡಲಾಗುತ್ತಿದೆ.

ಕೋವಿಡ್​ ಸಾವಿನ ಬಗ್ಗೆ ಯಾವುದೇ ಭಯ ಬೇಡ, ಇತರ ಮಾರಣಾಂತಿಕ ರೋಗಗಳಿಗೆ ತುತ್ತಾದವರು ಮಾತ್ರ ಕೋವಿಡ್ ತಗುಲಿದ್ರೆ ಸಾಯುತ್ತಿದ್ದಾರೆ ಅಷ್ಟೇ.. ಸಾವಿನ ಪ್ರಮಾಣ ತುಂಬಾ ಕಡಿಮೆ ಇದೆ. ಇದರ ಬಗ್ಗೆ ಜನರು ಭಯ ಪಡುವುದು ಬೇಡ ಎಂದು ವಿಜ್ಞಾನಿ ಪ್ರೊ. ಕೆ ಎಸ್ ರಂಗಪ್ಪ ತಿಳಿಸಿದರು.

ABOUT THE AUTHOR

...view details