ಕರ್ನಾಟಕ

karnataka

ETV Bharat / state

ಕೌಟುಂಬಿಕ ಕಲಹದಿಂದ ಗರ್ಭಿಣಿ ಆತ್ಮಹತ್ಯೆ ಯತ್ನ: ಒಂದು ದಿನದ ಹೆಣ್ಣು ಮಗು ಸಾವು - ಈಟಿವಿ ಭಾರತ್​ ಕನ್ನಡ ನ್ಯೂಸ್​

ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಹುಟ್ಟಿದ ಮರುದಿನವೇ ಮಗು ಸಾವನ್ನಪ್ಪಿದೆ.

ಹೆಣ್ಣು ಮಗು ಸಾವು
ಹೆಣ್ಣು ಮಗು ಸಾವು

By

Published : Jul 17, 2023, 8:08 PM IST

ಮೈಸೂರು : ಕೌಟುಂಬಿಕ ಕಲಹದಿಂದ ಬೇಸತ್ತ ಬಾಣಂತಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಹುಟ್ಟಿದ ಹೆಣ್ಣು ಮಗು ಒಂದೇ ದಿನಕ್ಕೆ ಸಾವನ್ನಪ್ಪಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ತಾಯಿ ಅರ್ಪಿತಾ ಎಂಬುವವರಿಗೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಣಿಯನಹುಂಡಿ ಗ್ರಾಮದ ಸಿದ್ದರಾಜು ಎಂಬುವರ ಜೊತೆ ವಿವಾಹವಾಗಿದ್ದ ಅರ್ಪಿತಾ ಗರ್ಭಿಣಿಯಾಗಿದ್ದು, ಸೆಪ್ಟೆಂಬರ್​ಗೆ ಹೆರಿಗೆ ದಿನಾಂಕ ನೀಡಲಾಗಿತ್ತು. ಈ ನಡುವೆ ಗಂಡ ಹೆಂಡತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ಬೇಸರಗೊಂಡು ಅರ್ಪಿತಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅಸ್ವಸ್ಥರಾಗಿದ್ದ ಗರ್ಭಿಣಿಯನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು.

ಈ ಸಂದರ್ಭದಲ್ಲಿ ನಿಗದಿತ ಅವಧಿಗೂ ಮುನ್ನ ಅರ್ಪಿತಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಆದರೇ ವಿಧಿಯಾಟ ಎಂಬಂತೆ ಮರುದಿನವೇ ಮಗು ಮೃತಪಟ್ಟಿದೆ. ಮತ್ತೊಂದೆಡೆ ಆಸ್ಪತ್ರೆಯಲ್ಲಿ ಅರ್ಪಿತಾರಿಗೆ ಚಿಕಿತ್ಸೆ ಮುಂದುವರೆದಿದ್ದು, ಈ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗರ್ಭಿಣಿ ಪತ್ನಿಯ ಕೊಲೆಗೆ ಯತ್ನ; ಆರೋಪಿ ಗಂಡ ಬಂಧನ( ಬೆಂಗಳೂರು) : ಗರ್ಭಿಣಿ ಪತ್ನಿಯನ್ನು ಅಪಘಾತ ಮಾಡಿ ಹತ್ಯೆ ಮಾಡಲು ಯತ್ನಿಸಿದ ಆರೋಪಿ ಪತಿ ಮತ್ತು ಆತನ ಸಹಚರನನ್ನು 6 ತಿಂಗಳ ಬಳಿಕ ಜುಲೈ 16 ಭಾನುವಾರ ದಂದು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಪತಿ ಅರವಿಂದ ಹಾಗೂ ಆತನ ಸಹಚರ ಉದಯ್ ಕುಮಾರ್ ಬಂಧಿತ ಆರೋಪಿಗಳು. ಹೊಸ ವರ್ಷದ ದಿನದಂದೇ ಬೆಂಗಳೂರಿನ ಬಾಗಲೂರಿನ ಕೆಐಡಿಬಿ ಲೇಔಟ್​​ ಬಳಿ ದ್ವಿಚಕ್ರ ವಾಹನದಲ್ಲಿ‌ ಬರುತ್ತಿದ್ದ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಚೈತನ್ಯ ಎಂಬಾಕೆಗೆ ಅಪಘಾತವೆಸಗಿದ್ದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮನನೊಂದು ಗೃಹಿಣಿ ಆತ್ಮಹತ್ಯೆ : ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ವಿರುದ್ಧ ಡೆತ್ ನೋಟ್ ಬರೆದಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜುಲೈ 2ರಂದು ಬೆಳಗಿನ ಜಾವ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಹೆಗ್ಗನಹಳ್ಳಿ‌ ನಿವಾಸಿ ಪವಿತ್ರಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಮೊದಲ ಪತಿಯೊಂದಿಗೆ ಕೌಟುಂಬಿಕ ಕಲಹ ಏರ್ಪಟ್ಟಿದ್ದು, ವಿಚ್ಛೇದನ ಪಡೆದಿದ್ದರು. ಬಳಿಕ ಖಾಸಗಿ ಕಂಪನಿಯೊಂದರಲ್ಲಿ‌ ಮ್ಯಾನೇಜರ್ ಆಗಿ ಕೆಲಸ ಆರಂಭಿಸಿದ್ದ ಪವಿತ್ರ ಅದೇ ಕಂಪನಿಯ ಮಾಲೀಕನಾಗಿರುವ ಚೇತನ್ ಗೌಡ ಎಂಬುರನ್ನು ಪ್ರೀತಿಸಿ ವಿವಾಹವಾಗಿದ್ದರು.

ಇತ್ತೀಚಿಗೆ ತೀವ್ರವಾಗಿ ಮನನೊಂದಿದ್ದ ಪವಿತ್ರಾ, ಜುಲೈ 2ರಂದು ಗಂಡನೊಂದಿಗಿನ ಜಗಳದ ದೃಶ್ಯಗಳು, ಡೆತ್ ನೋಟ್ ಫೋಟೋಗಳನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಪ್ರಕಟಿಸಿದ್ದರು. ಸ್ಟೇಟಸ್ ನೋಡಿದ್ದ ಪವಿತ್ರಾರ ತಾಯಿ ಮಗಳ ಮನೆಗೆ ಬಂದು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತಳ ತಾಯಿ ಪದ್ಮಮ್ಮ ನೀಡಿರುವ ದೂರಿನನ್ವಯ ಚೇತನ್ ಗೌಡ ಹಾಗೂ ಅವರ ಪ್ರೇಯಸಿಯ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಪರೀಕ್ಷೆಯಲ್ಲಿ ನಕಲು ಮಾಡಲು ಹೋಗಿ ಸಿಕ್ಕಿಬಿದ್ದ.. ಅವಮಾನ ತಾಳಲಾರದೇ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ABOUT THE AUTHOR

...view details