ಮೈಸೂರು: ಒಡೆಯ ಸಿನಿಮಾ ಬಿಡುಗಡೆ ಹಿನ್ನೆಲೆ ಪೊಲೀಸರ ಅನುಮತಿ ಪಡೆಯದೆ ದರ್ಶನ್ ಅಭಿಮಾನಿಗಳು ನಡೆಸುತ್ತಿದ್ದ ಮೆರವಣಿಗೆಗೆ ಪೊಲೀಸರು ತಡೆಯೊಡ್ಡಿದ್ದಾರೆ.
ಅನುಮತಿ ಪಡೆಯದೆ 'ಒಡೆಯ'ನ ಮೆರವಣಿಗೆ: ಅಭಿಮಾನಿಗಳಿಗೆ ಖಾಕಿ ತಡೆ
ಒಡೆಯ ಸಿನಿಮಾ ಬಿಡುಗಡೆ ಹಿನ್ನೆಲೆ ಪೊಲೀಸರ ಅನುಮತಿ ಪಡೆಯದೇ ದರ್ಶನ್ ಅಭಿಮಾನಿಗಳು ನಡೆಸುತ್ತಿದ್ದ ಮೆರವಣಿಗೆಗೆ ಪೊಲೀಸರು ತಡೆ ನೀಡಿದ್ದಾರೆ.
ನಾಳೆ ಒಡೆಯ ಚಿತ್ರ ಬಿಡುಗಡೆ ಆಗಲಿದ್ದು, ಈ ಹಿನ್ನೆಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹಾಗೂ ಚಿತ್ರ ತಂಡ ಇಂದು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ನಕ್ಷತ್ರ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು.
ಈ ಮೆರವಣಿಗೆಗೆ ಸಾರೋಟುಗಳು ಬಂದು ನಿಂತಿದ್ದವು. ಆದರೆ ಮೆರವಣಿಗೆ ಸಾಗುವ ದೊಡ್ಡ ಗಡಿಯಾರ, ಗಾಂಧಿ ವೃತ್ತ, ಪ್ರಭ ಚಿತ್ರ ಮಂದಿರ, ನ್ಯೂ ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆಯಲ್ಲಿ ಸಾಗುವ ಮಾರ್ಗದಲ್ಲಿ ಪೊಲೀಸ್ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಗಬೇಕಿದ್ದ ನಕ್ಷತ್ರ ಮೆರವಣಿಗೆಯನ್ನು12 ಗಂಟೆಗೆ ಹಾಕಲಾಯಿತು. ಆದರೂ 12 ಗಂಟೆಗೂ ಈ ಮೆರವಣಿಗೆಗೆ ಪೊಲೀಸ್ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಮೆರವಣಿಗೆ ನಡೆಸದಂತೆ ಪೊಲೀಸರು ಅಭಿಮಾನಿಗಳನ್ನು ತಡೆದು ವಾಪಸ್ ಕಳುಹಿಸಿದರು.