ಮೈಸೂರು: ಚಿತ್ರದುರ್ಗ ಮುರುಘಾ ಶ್ರೀಗಳು ಸೇರಿದಂತೆ 7 ಜನರ ವಿರುದ್ಧ ಮತ್ತೊಂದು ಪೋಕ್ಸೋ ಪ್ರಕರಣ ದಾಖಲಾಗಿದೆ. ಚಿತ್ರದುರ್ಗ ಮಠದ ವಸತಿ ಶಾಲೆಯ ಅಡುಗೆ ಸಹಾಯಕಿಯೊಬ್ಬರು ತಮ್ಮಿಬ್ಬರು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ದೂರಿನಲ್ಲಿ ಮುರುಘಾ ಶ್ರೀಗಳು ಮೊದಲ ಆರೋಪಿ, ಎರಡನೇ ಆರೋಪಿಯಾಗಿ ವಾರ್ಡನ್ ರಶ್ಮಿ ಮತ್ತು ಕ್ರಮವಾಗಿ ಬಸವಾದಿತ್ಯ, ಪರಮಶಿವಯ್ಯ, ಗಂಗಾದರಯ್ಯ ಮತ್ತು ಸ್ವಾಮೀಜಿ ಸಹಾಯಕರಾದ ಮಾಲಿಂಗ ಮತ್ತು ಕರಿಬಸಪ್ಪ 6 ಮತ್ತು 7ನೇ ಆರೋಪಿ ಎಂದು ನಮೂದಿಸಲಾಗಿದೆ.
ಇದನ್ನೂ ಓದಿ:ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ