ಮೈಸೂರು :ಕೊರೊನಾದಿಂದಾಗಿ ನನ್ನ ಅವಧಿಯಲ್ಲಿ ಕೆಲಸ ಮಾಡಲು ಆಗಿಲ್ಲ. ಆದ್ದರಿಂದ ಮೇಯರ್ ಅವಧಿ ವಿಸ್ತರಿಸಲು ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ ಎಂದು ಮೇಯರ್ ತಸ್ನೀಂ ಹೇಳಿದರು.
ಓದಿ: ಮೈಸೂರಿನಲ್ಲಿ ಕೊರೊನಾ ಭೀತಿ: ಪಾಲಿಕೆ ಸಭೆಗೆ ಮಾಸ್ಕ್ ಧರಿಸಿ ಬಂದ ಮೇಯರ್, ಉಪಮೇಯರ್..!
ಮೇಯರ್ ಗೆಸ್ಟ್ ಹೌಸ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಮೇಯರ್ ಆಗಿ ಆಯ್ಕೆಗೊಂಡು ಒಂದು ತಿಂಗಳ ನಂತರ ಕೊರೊನಾ ಅವರಿಸಿತು.
ಅಲ್ಲದೆ ನನ್ನ ಅವಧಿಯಲ್ಲಿ ಆಗಿರುವ ಕೆಲಸ ಕಾರ್ಯಗಳ ಬಗ್ಗೆ ತುಂಬ ಬೇಸರವಿದೆ. ನಮ್ಮ ಜೊತೆ ಮೈತ್ರಿಯಲ್ಲಿದ್ದ ಕಾಂಗ್ರೆಸ್ನವರು ಕೌನ್ಸಿಲ್‌ನಲ್ಲಿ ಸಹಕಾರ ನೀಡಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ನಾನು ಮೇಯರ್ ಆಗಿರುವ ಅವಧಿಯಿಂದ ರಾಜ್ಯ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ಮೇಯರ್ ವಿವೇಚನಾ ಕೋಟಾದ ಅನುದಾನವನ್ನು ಕೊಟ್ಟಿಲ್ಲ. ಇಷ್ಟೆಲ್ಲದರ ಜೊತೆಗೆ ಕೆಲವು ತಾಂತ್ರಿಕ ಕಾರಣಗಳಿಂದ ಅಭಿವೃದ್ಧಿ ಕೆಲಸ ಮಾಡಲು ಆಗಿಲ್ಲ.
ಇನ್ನು, ಕೆಲವು ದಿನಗಳಲ್ಲಿ ಮೇಯರ್ ಚುನಾವಣೆ ನಡೆಯಲಿದೆ. ನನ್ನ ಅವಧಿಯಲ್ಲಿ ಯಾವುದೇ ಕೆಲಸ ಮಾಡಲು ಆಗದೆ ಇರುವುದರಿಂದ ನನಗೆ ಮೇಯರ್ ಅವಧಿ ವಿಸ್ತರಿಸಬೇಕು ಎಂದು ನಾಳೆ ಸಿಎಂಗೆ ಮನವಿ ಮಾಡುತ್ತೇನೆ ಎಂದರು.