ಕರ್ನಾಟಕ

karnataka

ETV Bharat / state

ದಸರಾದಲ್ಲಿ ಭಾಗವಹಿಸುತ್ತಿದ್ದ ಸಾಕಾನೆ ಗೋಪಾಲಸ್ವಾಮಿ ಕಾಡಾನೆ ದಾಳಿಗೆ ಬಲಿ - DCF Harsha Kumar

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕೊಳುವಿಗೆ ಬಳಿ ಅರಣ್ಯ ಪ್ರದೇಶದಲ್ಲಿ ಗೋಪಾಲಸ್ವಾಮಿ ಸಾಕಾನೆಯು ಮೃತ ಪಟ್ಟಿದೆ.

ಸಾಕಾನೆ ಗೋಪಾಲಸ್ವಾಮಿ ಮೃತ
ಸಾಕಾನೆ ಗೋಪಾಲಸ್ವಾಮಿ ಮೃತ

By

Published : Nov 23, 2022, 8:20 PM IST

ಮೈಸೂರು: ಜಗತ್ಪ್ರಸಿದ್ಧ ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಗೋಪಾಲಸ್ವಾಮಿ ಸಾಕಾನೆಯು ಕಾಡಾನೆ ದಾಳಿಗೆ ತುತ್ತಾಗಿ ಇಂದು ಮೃತಪಟ್ಟಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕೊಳುವಿಗೆ ಬಳಿ ಅರಣ್ಯ ಪ್ರದೇಶದಲ್ಲಿ ಗೋಪಾಲಸ್ವಾಮಿ ಸಾಕಾನೆಯು ಮೃತ ಪಟ್ಟಿದ್ದು, ಮಂಗಳವಾರದಂದು ನೇರಳಕುಪ್ಪೆ ಬಿ ಹಾಡಿಯ ಕ್ಯಾಂಪ್​ನಿಂದ ಮೇಯಲು ಅರಣ್ಯಕ್ಕೆ ಬಿಟ್ಟಿದ್ದ ವೇಳೆ ಮಸ್ತಿಗೆ ಬಂದ ಗೋಪಾಲಸ್ವಾಮಿ ಕೊಳುವಿಗೆ ಅರಣ್ಯ ಪ್ರದೇಶಕ್ಕೆ ಹೋಗಿದೆ.

ಮಸ್ತಿಗೆ ಬಂದಿದ್ದ ಗೋಪಾಲಸ್ವಾಮಿಯ ಮೇಲೆ ಈ ಹಿಂದೆ ಅರಣ್ಯ ಇಲಾಖೆಯವರು ಪುಂಡಾಟ ನಡೆಸುತ್ತಿರುವ ಕಾಡಾನೆಗೆ ಕಾಲರ್ ಅಳವಡಿಸಿದ್ದು, ಅಯ್ಯಪ್ಪ ಪುಂಡಾನೆಯ ದಾಳಿಗೆ ಸಿಲುಕಿ ತೀವ್ರತರವಾಗಿ ಗಾಯಗೊಂಡಿತ್ತು.

ಮಂಗಳವಾರ ಮಧ್ಯಾಹ್ನದಿಂದ ನಾಲ್ಕು ವೈದ್ಯರ ತಂಡ ಎಲ್ಲ ರೀತಿಯ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಬುಧವಾರ ಮಧ್ಯಾಹ್ನ 1 ಗಂಟೆ ವೇಳೆ ಸಾವಿಗೀಡಾಗಿದೆ. ಸ್ಥಳಕ್ಕೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಎಸಿಎಫ್ ದಯಾನಂದ್ ಸೇರಿದಂತೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದರು. ಇಂದು ಸಂಜೆ ಕೊಳುವಿಗೆ ಬಳಿ ಅಂತ್ಯಸಂಸ್ಕಾರ ನಡೆಸಲಾಯಿತು.

ಓದಿ:ಮೂರು ತಿಂಗಳಲ್ಲಿ ಮೂವರು ರೈತರು ಬಲಿ: ಕಾಡಾನೆ ಸ್ಥಳಾಂತರಕ್ಕೆ ಸರ್ಕಾರ ಆದೇಶ

ABOUT THE AUTHOR

...view details