ಮೈಸೂರು:ಮಾನವ ಸಂಪನ್ಮೂಲ ಸಚಿವಾಲಯವು ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ - 2020 ಕಾರ್ಯಕ್ರಮಕ್ಕೆ ನಾಳೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಚಾಲನೆ ಸಿಗಲಿದೆ. ನಾಳೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಂಡ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆ ರಾಜ್ಯಕ್ಕೆ ಸಿಕ್ಕರೆ, ಮೈಸೂರು ವಿಶ್ವವಿದ್ಯಾನಿಲಯ ಈ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಂಡ ವಿವಿ ಎನಿಸಲಿದೆ.
ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಚಿಟ್ಚಾಟ್ ಈ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಕೂಲತೆ ಏನು? ಇದರಿಂದ ವಿದ್ಯಾರ್ಥಿಗಳಿಗೆ ಯಾವ ರೀತಿ ಅನುಕೂಲವಾಗಲಿದೆ ಎಂಬ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ 'ಈಟಿವಿ ಭಾರತ್'ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಈ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ರೂಪಿಸಿಕೊಳ್ಳಬಹುದು. ಜೊತೆಗೆ ಒಂದು ವರ್ಷ ಪದವಿ ತರಗತಿಯನ್ನು ಓದಿದ ವಿದ್ಯಾರ್ಥಿ ಕಲಿಕೆಯಿಂದ ಜೀವನವನ್ನು ನಡೆಸುವ ಶಿಕ್ಷಣ ಪಡೆಯಬಹುದಾಗಿದ್ದು. ಪುನಃ ಒಂದು ವರ್ಷ ಬಿಟ್ಟು ನಂತರ 2ನೇ ವರ್ಷಕ್ಕೆ ತರಗತಿಗೆ ಸೇರಿಕೊಳ್ಳಬಹುದು. ಈ ಶಿಕ್ಷಣ ನೀತಿಯಲ್ಲಿ 3 ವರ್ಷಕ್ಕೆ ಪದವಿ ಪತ್ರ ಪಡೆಯಬಹುದು. ಜೊತೆಗೆ ನಾಲ್ಕು ವರ್ಷ ಪೂರೈಸಿದರೆ ಬ್ಯಾಚುಲರ್ ಡಿಗ್ರಿ ಪಡೆಯಬಹುದು. ಈ ವಿಚಾರದಲ್ಲಿ ಗೊಂದಲ ಬೇಡ ಎಂದು ಕುಲಪತಿಗಳು ವಿವರಿಸಿದ್ರು.
ಈ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಜೊತೆಗೆ ಬಹು ಶಿಸ್ತ್ರೀಯ(Multi disciplinary) ಶಿಕ್ಷಣವನ್ನು ಪಡೆಯಲು ಅವಕಾಶವಿರುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಕೂಲಗಳನ್ನು ವಿವರಿಸಿದ ಕುಲಪತಿಗಳು ಈ ವರ್ಷ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಇಂಜಿನಿಯರಿಂಗ್ ಕಾಲೇಜನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.