ಮೈಸೂರು: ಟೈಮ್ಸ್ ಹೈಯರ್ ಎಜುಕೇಶನ್ ಪ್ರಕಟಿಸಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯ 1,000 ಪ್ಲಸ್ ಸ್ಥಾನ ಪಡೆದುಕೊಂಡಿದೆ ಎಂದು ವಿವಿ ಕುಲಪತಿ ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಟೈಮ್ಸ್ ಹೈಯರ್ ಎಜುಕೇಶನ್ ರ‍್ಯಾಂಕಿಂಗ್: ಮೈಸೂರು ವಿವಿಗೆ ಅಗ್ರಸ್ಥಾನ - ಟೈಮ್ಸ್ ಹೈಯರ್ ಎಜುಕೇಶನ್
ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ‍್ಯಾಂಕಿಂಗ್ ನೀಡುವ ಜಾಗತಿಕ ಸಂಸ್ಥೆಯಾದ ಟೈಮ್ಸ್ ಹೈಯರ್ ಎಜುಕೇಶನ್ ಪ್ರಕಟಿಸಿರುವ ಪಟ್ಟಿಯಲ್ಲಿ ಮೈಸೂರು ವಿವಿ ಈ ಬಾರಿಯೂ 1,000 ಪ್ಲಸ್ ಸ್ಥಾನ ಗಳಿಸಿದೆ.
mysore
ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ‍್ಯಾಂಕಿಂಗ್ ನೀಡುವ ಜಾಗತಿಕ ಸಂಸ್ಥೆಯಾದ ಟೈಮ್ಸ್ ಹೈಯರ್ ಎಜುಕೇಶನ್ ಪ್ರಕಟಿಸಿರುವ ಪಟ್ಟಿಯಲ್ಲಿ ಮೈಸೂರು ವಿವಿ ಈ ಬಾರಿಯೂ ಈ ಸ್ಥಾನ ಗಳಿಸಿದ್ದು, ಮೈಸೂರು ವಿವಿ 2019ರಿಂದಲೂ ಈ ಉನ್ನತ ಸ್ಥಾನ ಉಳಿಸಿಕೊಂಡು ಬರುತ್ತಿದ್ದು, ಈ ವರ್ಷ ರಾಜ್ಯದ ವಿವಿಗಳಲ್ಲಿ ಮೈಸೂರು ವಿವಿ ಮೊದಲ ಸ್ಥಾನ ಗಳಿಸಿದೆ.
ಭಾರತದಲ್ಲಿ ಒಟ್ಟು 35 ವಿವಿಗಳು ಮಾತ್ರ 1000 ಪ್ಲಸ್ ಶ್ರೇಯಾಂಕ ಪಡೆದುಕೊಂಡಿವೆ. ಈ ಬಾರಿ ವಿಶ್ವದ 92ದೇಶಗಳು 1,400ಕ್ಕೂ ಹೆಚ್ಚು ವಿವಿಗಳು ಸ್ಪರ್ಧೆಯಲ್ಲಿದ್ದವು ಎಂದು ಉಪಕುಲಪತಿ ತಿಳಿಸಿದ್ದಾರೆ.