ಮೈಸೂರು :ಅರಮನೆಯ ಸಾಕಾನೆಗಳನ್ನು ಗುಜರಾತ್‌ಗೆ ಕಳುಹಿಸಲು ಈಗಾಗಲೇ ನಮಗೆ ವೈಲ್ಡ್ ಲೈಫ್ ಚೀಫ್ ಅವರಿಂದ ಪತ್ರ ಬಂದಿದೆ. ಅವರ ಸೂಚನೆಯಂತೆ ನಾವು 6 ಆನೆಗಳ ಪೈಕಿ 4 ಆನೆಗಳನ್ನ ಕಳಿಸಬೇಕಿದೆ ಎಂದು ಡಿಸಿಎಫ್ ಕಾರಿಕಾಳನ್ ಸ್ಪಷ್ಟಪಡಿಸಿದರು.
ಶೀಘ್ರದಲ್ಲಿ ಅರಮನೆ ಆನೆಗಳು ಗುಜರಾತ್‌ಗೆ ಶಿಫ್ಟ್ : ಡಿಸಿಎಫ್ ಕಾರಿಕಾಳನ್ - ಶೀಘ್ರದಲ್ಲಿ ಮೈಸೂರು ಅರಮನೆ ಆನೆಗಳು ಗುಜರಾತ್‌ಗೆ ಶಿಫ್ಟ್
ಗುಜರಾತ್‌ವರೆಗೆ ಆನೆಗಳನ್ನ ಕೊಂಡೊಯ್ಯುವುದು ಒಂದು ದೊಡ್ಡ ಟಾಸ್ಕ್ ಆಗಿದೆ. ಸುಮಾರು ಎರಡು ಮೂರು ಸಾವಿರ ಕಿ.ಮೀ ದೂರ ಪ್ರಯಾಣ ಅಂದ್ರೆ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಸ್ಟಾಂಡರ್ಡ್ ಆಪರೇಟಿಂಗ್ ಪ್ರೋಸಿಜರ್ಸ್ ಮೂಲಕ ಆನೆಗಳನ್ನ ಸಾಗಿಸಬೇಕಾಗುತ್ತದೆ. ಆನೆಗಳ ಆಹಾರ, ಆರೋಗ್ಯ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಾಗಣೆ ಮಾಡಲಾಗುತ್ತದೆ..
ಮೈಸೂರು ಅರಮನೆ ಆನೆಗಳನ್ನ ಗುಜರಾತ್‌ಗೆ ಕಳುಹಿಸುವ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನೊಂದು ವಾರದಲ್ಲಿ ಆನೆಗಳ ಆರೋಗ್ಯ ತಪಾಸಣೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಇನ್ನೊಂದು ವಾರದಲ್ಲಿ ಆನೆಗಳ ವೈದ್ಯಕೀಯ ತಪಾಸಣೆ ನಡೆಸಿ ವರದಿ ಸಲ್ಲಿಸಲಾಗುವುದು. ವೈಲ್ಡ್ ಲೈಫ್ ಚೀಫ್ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಗುಜರಾತ್‌ವರೆಗೆ ಆನೆಗಳನ್ನ ಕೊಂಡೊಯ್ಯುವುದು ಒಂದು ದೊಡ್ಡ ಟಾಸ್ಕ್ ಆಗಿದೆ. ಸುಮಾರು ಎರಡು ಮೂರು ಸಾವಿರ ಕಿ.ಮೀ ದೂರ ಪ್ರಯಾಣ ಅಂದ್ರೆ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಸ್ಟಾಂಡರ್ಡ್ ಆಪರೇಟಿಂಗ್ ಪ್ರೋಸಿಜರ್ಸ್ ಮೂಲಕ ಆನೆಗಳನ್ನ ಸಾಗಿಸಬೇಕಾಗುತ್ತದೆ. ಆನೆಗಳ ಆಹಾರ, ಆರೋಗ್ಯ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಾಗಣೆ ಮಾಡಲಾಗುತ್ತದೆ ಎಂದರು.