ಕರ್ನಾಟಕ

karnataka

ETV Bharat / state

ಮೈಸೂರು : ‘ಮೂಡಾ’ ಹೆಸರಲ್ಲಿ ಕೋಟ್ಯಂತರ ರೂ.ವಂಚನೆ.. ಆರೋಪಿ ಸಾಗರ್ ಬಂಧನ.. - mysuru crime news

ಮೂಡಾದ ನಕಲಿ ಲೆಟರ್ ಹೆಡ್ ಅನ್ನು ಬಳಸಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿರುವ ಬೆಳಗಾವಿ ಮೂಲದ ಸಾಗರ್ ದೇಶಪಾಂಡೆಯನ್ನು ಮೈಸೂರಿನ ಸರಸ್ವತಿಯ ಪುರಂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

muda
ವಂಚನೆ..

By

Published : Jan 4, 2021, 3:14 PM IST

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ವತಿಯಿಂದ ಸೈಟ್ ಕೊಡಿಸುತ್ತೇನೆ ಎಂದು ಜನರಿಗೆ ವಂಚಿಸುತ್ತಿದ್ದ ಸಾಗರ್ ದೇಶಪಾಂಡೆಯನ್ನು ಸರಸ್ವತಿಪುರಂ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಮೂಡಾದ ನಕಲಿ ಲೆಟರ್ ಹೆಡ್ ಅನ್ನು ಬಳಸಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿರುವ ಬೆಳಗಾವಿ ಮೂಲದ ಸಾಗರ್ ದೇಶಪಾಂಡೆಯನ್ನು ಪೊಲೀಸರು ಶಿರಡಿಯಲ್ಲಿ ಬಂಧಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ವಂಚಿಸಿರುವ ಬಗ್ಗೆ ಡಿಸಿಪಿ ಡಾ.ಪ್ರಕಾಶ್ ಗೌಡರಿಂದ ಮಾಹಿತಿ

ಆರೋಪಿಯು ಬೆಂಗಳೂರು ಮತ್ತು ಬೆಳಗಾವಿಯಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ನ್ಯಾಯಾಧೀಶರ ಮುಂದೆ ಸಾಗರ್​ನನ್ನು ಹಾಜರುಪಡಿಸಿ, ತನಿಖೆ ಮುಂದುವರಿಸಲಾಗಿದೆ.

ಸಾಗರ್, ಮೈಸೂರಿನಲ್ಲಿ ವಿಸ್ಮಯ ರೆಸ್ಟೋರೆಂಟ್ ನಡೆಸುತ್ತಿದ್ದ. ಅಲ್ಲಿಗೆ ಬರುವ ಶ್ರೀಮಂತರನ್ನು ಪರಿಚಯ ಮಾಡಿಕೊಂಡು, ಮೂಡಾದಲ್ಲಿ ನಮಗೆ ಬೇಕಾದ ಅಧಿಕಾರಿಗಳಿದ್ದಾರೆ. ನಿಮಗೆ ಕಡಿಮೆ ದರದಲ್ಲಿ ಸೈಟ್ ಕೊಡಿಸುತ್ತೇನೆಂದು ನಂಬಿಸಿ ಹಣ ವಸೂಲಿ ಪಡೆದು, ಮೂಡಾದ ನಕಲಿ ಲೆಟರ್ ಹೆಡ್ ನೀಡಿ ವಂಚಿಸುತ್ತಿದ್ದ ಎಂದು ಕಾನೂನು ಸುವ್ಯವಸ್ಥೆಯ ಡಿಸಿಪಿ ಡಾ. ಪ್ರಕಾಶ್ ಗೌಡ ತಿಳಿಸಿದ್ದಾರೆ.

ABOUT THE AUTHOR

...view details