ಮೈಸೂರು: ಲಾಕ್ಡೌನ್ ನಿಂದಾಗಿ ಮೃಗಾಲಯದ ಪ್ರಾಣಿಗಳು ಕೂಡ ಸಂಕಷ್ಟದಲ್ಲಿದ್ದು, ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಿ ಎಂದು ಸಚಿವ ಎಸ್.ಟಿ ಸೋಮಶೇಖರ್ ತಮ್ಮ ವಾಟ್ಸ್ಆ್ಯಪ್ ಗ್ರೂಫ್ನಲ್ಲಿ ಮನವಿ ಮಾಡಿದ್ದರು. ಇದಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದೆ.
ಸಚಿವರ ವಾಟ್ಸ್ಆ್ಯಪ್ ಸಂದೇಶದಿಂದ ಹರಿದುಬಂತು 73 ಲಕ್ಷ!
ಸಚಿವರು , ತಮ್ಮ ಯಶವಂತಪುರ ಕ್ಷೇತ್ರದ ಜನರಿಗಾಗಿ ರಚಿಸಿರುವ ವಾಟ್ಸ್ ಆಪ್ ಗ್ರೂಫ್ ವೊಂದರಲ್ಲಿ, ಸಂಕಷ್ಟದಲ್ಲಿರುವ ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ಭರಪೂರ ಸಹಾಯ ಒದಗಿಬಂದಿದೆ.
ಇವರ ಮನವಿಗೆ ಯಶವಂತಪುರ ಕ್ಷೇತ್ರದ ಜನರಿಂದ 73 ಲಕ್ಷ ರೂ. ಹಣ ಸಂಗ್ರಹವಾಗಿದ್ದು , ಈ ಹಣವನ್ನು ಸಚಿವರು ಇಂದು ಮೃಗಾಲಯಕ್ಕೆ ಹಸ್ತಾಂತರಿಸಿದರು. ಲಾಕ್ಡೌನ್ ನಿಂದ ಮೃಗಾಲಯದ ನಿರ್ವಹಣೆ ಕಷ್ಟ ಆಗಿದೆ ಎಂದು ಕಳೆದ ವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮೃಗಾಲಯಕ್ಕೆ ಭೇಟಿ ನೀಡಿದ್ದಾಗ ಅಧಿಕಾರಿಗಳು ಸಚಿವರಿಗೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಚಾಮುಂಡಿ ಎಂಬ ಹೆಣ್ಣಾನೆಯನ್ನು ಒಂದು ವರ್ಷಕ್ಕೆ ದತ್ತು ತೆಗೆದಕೊಂಡಿದ್ದ ಸಚಿವರು, ಬೆಂಗಳೂರಿಗೆ ಹೋದ ನಂತರ ತಮ್ಮ ಯಶವಂತಪುರ ಕ್ಷೇತ್ರದ ಜನರಿಗಾಗಿ ರಚಿಸಿರುವ ವಾಟ್ಸ್ಆ್ಯಪ್ ಗ್ರೂಫ್ ವೊಂದರಲ್ಲಿ, ಸಂಕಷ್ಟದಲ್ಲಿರುವ ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದರು.
ಈ ಮನವಿಗೆ ಸ್ಪಂದಿಸಿದ ಕ್ಷೇತ್ರದ ಜನರು 5000 ದಿಂದ 10 ಲಕ್ಷದ ವರೆಗೆ ಮೃಗಾಲಯಕ್ಕೆ ದೇಣಿಗೆ ನೀಡಿದ್ದು , ಒಂದೇ ದಿನಕ್ಕೆ 73,16,000 ಹಣ ಸಂಗ್ರಹವಾಗಿದೆ. ಈ ಹಣವನ್ನು ಸಚಿವರು ಇಂದು ಮೃಗಾಲಯದ ಕಾರ್ಯ ನಿರ್ವಹಣಾ ಅಧಿಕಾರಿ ಅಜಿತ್ ಕುಲಕರ್ಣಿ ಅವರಿಗೆ ಹಸ್ತಾಂತರಿಸಿದರು. ಅಲ್ಲದೇ ಇನ್ನು ಹೆಚ್ಚಿನ ಹಣವನ್ನು ಸಂಗ್ರಹಿಸಿ ಕೊಡುತ್ತೇನೆ ಎಂದು ಹೇಳಿದ ಸಚಿವರು, ಕೂಡಲೇ ರಾಜ್ಯದ ನಾಯಕರು, ಶಾಸಕರು, ಮಂತ್ರಿಗಳು ವಿಧಾನ ಪರಿಷತ್ ಸದಸ್ಯರು, ಲೋಕಾಸಭಾ ಸದಸ್ಯರು ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.