ಮೈಸೂರು: ಶಾಸಕರ ಆಪ್ತರಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ರಾಮ್‌ದಾಸ್ ಕಚೇರಿ ಸೀಲ್‌ಡೌನ್ ಆಗಿದೆ.
ಬಿಜೆಪಿ ಶಾಸಕ ರಾಮ್‌ದಾಸ್ ಕಚೇರಿ ಸೀಲ್ ಡೌನ್! - ಬಿಜೆಪಿ ಶಾಸಕ ರಾಮ್‌ದಾಸ್ ಕಚೇರಿ ಸೀಲ್‌ಡೌನ್
ಶಾಸಕ ಎಸ್.ಎ.ರಾಮ್‌ದಾಸ್ ಅವರ ಕಾಡಾ ಕಚೇರಿಯ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಆಪ್ತರಿಗೆ ಸೋಂಕು ಕಾಣಿಸಿಕೊಂಡಿದೆ.
sealdown
ಕಳೆದ 3 ತಿಂಗಳಿನಿಂದ ಪ್ರತಿದಿನ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರದ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ. ರಾಮ್‌ದಾಸ್ ಅವರ ಕಾಡಾ ಕಚೇರಿಯ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಆಪ್ತರಿಗೆ ಸೋಂಕು ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಶಾಸಕರ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಶಾಸಕರನ್ನು ಸೆಲ್ಪ್ ಕ್ವಾರಂಟೈನ್ ಆಗುವಂತೆ ತಿಳಿಸಲಾಗಿದೆ. ಇನ್ನು ರಾಮ್‌ದಾಸ್ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳೀಯ ಬಿಜೆಪಿ ಮುಖಂಡರಲ್ಲೂ ಆತಂಕ ಶುರುವಾಗಿದೆ.