ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ: ಎಸ್​​ ಟಿ ಸೋಮಶೇಖರ್

ಆರ್.ಆರ್.ನಗರ ಉಪಚುನಾವಣೆಯಲ್ಲಿ‌ ಮುನಿರತ್ನ ಗೆಲುವು ಖಚಿತ. ಕಳೆದ ಬಾರಿ ಮುನಿರತ್ನ ವಿರುದ್ಧ ಸೋತ ಅಭ್ಯರ್ಥಿಗಳು ಈಗ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ..

minister-somashekar-talk-about-karnataka-cm-post-issue
ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ: ಎಸ್​​ಟಿ ಸೋಮಶೇಖರ್

By

Published : Oct 21, 2020, 9:54 PM IST

Updated : Oct 21, 2020, 11:07 PM IST

ಮೈಸೂರು:ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಖಾಲಿ ಇದ್ದರೆ ಮಾತ್ರ ನಾಯಕತ್ವದ ಪ್ರಶ್ನೆ ಬರುತ್ತೆ. ಈಗ ಯಾವ ಹುದ್ದೆಯೂ ಖಾಲಿ ಇಲ್ಲ‌ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್​​ ಟಿ ಸೋಮಶೇಖರ್ ಹೇಳಿದರು.

ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ: ಎಸ್​​ಟಿ ಸೋಮಶೇಖರ್

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹೇಳಿಕೆ ಪಕ್ಷದ ಹೇಳಿಕೆಯಲ್ಲ, ಅದು ಅವರ ವೈಯಕ್ತಿಕ ಹೇಳಿಕೆ. ಶಾಸಕರ ಹೇಳಿಕೆಯಿಂದ ನಾಯಕತ್ವದ ಬದಲಾವಣೆ ಇಲ್ಲ ಎಂದರು. ಆರ್.ಆರ್.ನಗರ ಉಪಚುನಾವಣೆಯಲ್ಲಿ‌ ಮುನಿರತ್ನ ಗೆಲುವು ಖಚಿತ.

ಕಳೆದ ಬಾರಿ ಮುನಿರತ್ನ ವಿರುದ್ಧ ಸೋತ ಅಭ್ಯರ್ಥಿಗಳು ಈಗ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಸಂಸದ ಪ್ರತಾಪ್ ಸಿಂಹ ಹಾಗೂ ನಂಜನಗೂಡು ಶಾಸಕ ಹರ್ಷವರ್ಧನ‌ ನಡುವೆ ನಡೆಯುತ್ತಿರುವ ವಾಕ್ಸಮರ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

Last Updated : Oct 21, 2020, 11:07 PM IST

ABOUT THE AUTHOR

...view details