ಕರ್ನಾಟಕ

karnataka

ETV Bharat / state

ಮೈಸೂರು ಮಹಾನಗರ ಪಾಲಿಕೆಯಲ್ಲಿ ವಾಟರ್​ ಮಾಫಿಯಾ: ಸಂಸದ ಪ್ರತಾಪ್​ ಸಿಂಹ ಆರೋಪ - kannadanews

ಮೈಸೂರು ನಗರ ಪಾಲಿಕೆಯಲ್ಲಿ ಕೌನ್ಸಿಲ್ ಮೀಟಿಂಗ್ ಕೇವಲ ನಾಮಕಾವಸ್ತೆಗೆ ಮಾತ್ರ ನಡೆಯುತ್ತಿದೆ. ಇಲ್ಲಿ ಕೇವಲ ಸೀನಿಯರ್​ ಕಾರ್ಪೊರೇಟರ್​ಗಳದ್ದೇ ಕಾರುಬಾರು ನಡೆಯುತ್ತಿದೆ ಎಂದು ಸಂಸದ ಪ್ರತಾಪ್​​ಸಿಂಹ ಆರೋಪಿಸಿದ್ದಾರೆ.

ಮೈಸೂರು ನಗರ ಪಾಲಿಕೆ ವಿರುದ್ಧ ಪ್ರತಾಪ್​ಸಿಂಹ ಘರ್ಜನೆ

By

Published : Jun 12, 2019, 4:39 PM IST

ಮೈಸೂರು:ಮೈಸೂರು ಮಹಾನಗರ ಪಾಲಿಕೆಯಲ್ಲಿ ವಾಟರ್​ ಮಾಫಿಯಾ ನಡೆಯುತ್ತಿದೆ ಎಂದು ಸಂಸದ ಪ್ರತಾಪ್​ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.

ವಿಜಯ ನಗರದ ವಾಟರ್ ಟ್ಯಾಂಕ್ ಸ್ಥಳ ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಕೇಂದ್ರ ಸರ್ಕಾರದ 14ನೇ ಹಣಕಾಸು ಆಯೋಗದಿಂದ ಪಾಲಿಕೆಗೆ ಅನುದಾನವನ್ನ ಕೊಡ್ತೇವೆ. ಈ ಬಾರಿಯೂ ಸಹ 68 ಕೋಟಿ ರೂಪಾಯಿ ಹಣವನ್ನ ನೀಡಿದ್ದೇವೆ. ಆದ್ರೆ, ಪಾಲಿಕೆಯಲ್ಲಿ ಕೌನ್ಸಿಲ್ ಮೀಟಿಂಗ್ ಎಂದು ನಾಮಕಾವಸ್ತೆಗೆ ಮಾಡಿ ಕೆಲವು ಸೀನಿಯರ್ ಕಾರ್ಪೊರೇಟರ್​​ಗಳು ತಮಗೆ ಬೇಕಾದ ಹಾಗೆ ಹೆಚ್ಚಿನ ಪಾಲನ್ನು ತೆಗೆದುಕೊಂಡು, ಅದನ್ನು ವಾರ್ಡಗಳಿಗೆ ಸಮನಾಗಿ ಹಂಚುತ್ತಿಲ್ಲವೆಂದು ದೂರಿದರು.

ಮೈಸೂರು ನಗರ ಪಾಲಿಕೆ ವಿರುದ್ಧ ಪ್ರತಾಪ್​ಸಿಂಹ ಘರ್ಜನೆ

ಈ ಬಗ್ಗೆ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ಗಮನಕ್ಕೂ ತಂದಿದ್ದು, ಕೂಡಲೇ ಡಿಸಿ ಅವರಿಗೂ ಪತ್ರ ಬರೆಯುತ್ತೇನೆ. ಕೇಂದ್ರದ 14ನೇ ಹಣಕಾಸು ನಿಧಿಯನ್ನು ಬಳಸಿಕೊಂಡು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಮಾಫಿಯಾ ಮಾಡ್ಕೊಂಡು ನನಗಿಷ್ಟು-ತನಗಿಷ್ಟು ಎಂದು ಹಂಚಿಕೊಂಡು ಅದಕ್ಕೆ ಕೌನ್ಸಿಲ್ ಮೀಟಿಂಗ್​ನಲ್ಲಿ ಅನುಮತಿ ಪಡೆದುಕೊಂಡು ಕೆಲಸ ಮಾಡುವ ವ್ಯವಹಾರ ನಡೆಯುತ್ತಿದೆ ಎಂದು ಸಂಸದ ಪ್ರತಾಪ್​ ಸಿಂಹ ಆರೋಪಿಸಿದ್ರು.

ABOUT THE AUTHOR

...view details