ಕರ್ನಾಟಕ

karnataka

ETV Bharat / state

ಮೈಸೂರು: ಪ್ರೀತಿಸಿ ಮದುವೆ... 5 ತಿಂಗಳಲ್ಲೇ ಪ್ರೇಮಿಗಳ ಬದುಕು ಅಂತ್ಯ - ಪತಿ ಪತ್ನಿ ಮೃತ

5 ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಪ್ರೇಮಿಗಳು ಸಾವಿನಲ್ಲೂ ಒಂದಾಗಿದ್ದಾರೆ. ಕಾಲುವೆಯಲ್ಲಿ ಜಾರಿ ಬಿದ್ದು ಪತಿ ಪತ್ನಿ ಮೃತಪಟ್ಟಿದ್ದಾರೆ.

love married couple became one even in death
ಪ್ರೀತಿಸಿ ಮದುವೆಯಾಗಿದ್ದ ಜೋಡಿ ಸಾವಿನಲ್ಲೂ ಒಂದಾದರು

By

Published : Nov 6, 2022, 6:53 AM IST

Updated : Nov 6, 2022, 10:21 AM IST

ಮೈಸೂರು: ಪ್ರೀತಿಸಿ ವಿವಾಹವಾದ ಜೋಡಿ ಸಾವಿನಲ್ಲೂ ಒಂದಾದ ದುರಂತ ಘಟನೆ ಮೈಸೂರಿನಲ್ಲಿ ನಡೆದಿದೆ. ಶಿವಕುಮಾರ್ (29) ಹಾಗೂ ಕವಿತಾ (25) ಸಾವಿನಲ್ಲೂ ಒಂದಾದ ದಂಪತಿ.

ಶಾದನಹಳ್ಳಿ ಗ್ರಾಮದ ನಿವಾಸಿಗಳಾದ ಪ್ರೇಮಿಗಳು 5 ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಶ್ರೀರಂಗಪಟ್ಟಣ ಮೊಗರಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. ಶನಿವಾರ ಕೆ.ಆರ್.ಎಸ್. ಬಳಿಯ ವರುಣಾ ಕಾಲುವೆ ಕಟ್ಟೆ ಮೇಲೆ ಕುಳಿತು ಬಟ್ಟೆ ಒಗೆಯುತ್ತಿದ್ದ ಕವಿತಾ ಆಕಸ್ಮಿಕವಾಗಿ ನೀರಿಗೆ ಜಾರಿ ಬಿದ್ದಿದ್ದರು. ಪತ್ನಿಯನ್ನು ರಕ್ಷಿಸಲು ಪತಿ ಶಿವಕುಮಾರ್ ಸಹ ನೀರಿಗೆ ಹಾರಿದ್ದಾರೆ.

ಆದರೆ ಇಬ್ಬರೂ ಸಹ ನೀರಿನಿಂದ ಮೇಲೆ ಬಂದಿಲ್ಲ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾಮನಕೆರೆಹುಂಡಿ ಬಳಿಯ ವರುಣಾ ಚಾನೆಲ್​ನಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ.

ನಾಲೆಯ ಬಳಿ ಬಟ್ಟೆ ಒಗೆಯುತ್ತಿರುವಾಗ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದ ಪತ್ನಿಯನ್ನು ರಕ್ಷಿಸಲು ನಾಲೆಗೆ ಹಾರಿದ ಪತಿಯೂ ಸಹ ನೀರು ಪಾಲಾಗಿದ್ದಾನೆ. ಪ್ರೀತಿಸಿ ವಿವಾಹವಾಗಿ ಒಟ್ಟಿಗೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ ಸಾವಿನಲ್ಲೂ ಸಹ ಒಂದಾಗಿದೆ. ದಂಪತಿಯ ಸಾವಿನ‌ ಕುರಿತಾಗಿ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಶಿರಸಿ: ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

Last Updated : Nov 6, 2022, 10:21 AM IST

ABOUT THE AUTHOR

...view details