ಮೈಸೂರು:ಹೊರ ರಾಜ್ಯದಿಂದ ಆಗಮಿಸಿದ್ದ ಜನತೆಯ ಹೋಂ ಕ್ವಾರಂಟೈನ್ ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿರುವ ಘಟನೆ ಟಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ.
ಹೋಂ ಕ್ವಾರಂಟೈನ್ ಮಾಡದಂತೆ ಸ್ಥಳೀಯರ ವಿರೋಧ - people opposing qurantine news
ಹೊರ ರಾಜ್ಯದಿಂದ ಬಂದವರನ್ನು ತಾಲೂಕಿನ ಹೃದಯ ಭಾಗದಲ್ಲೇ ಕ್ವಾರಂಟೈನ್ ಮಾಡದಂತೆ ಟಿ.ನರಸೀಪುರ ತಾಲೂಕಿನಲ್ಲಿ ಜನ ವಿರೋಧ ವ್ಯಕ್ತಪಡಿಸಿದ್ದಾರೆ.
ಟಿ.ನರಸೀಪುರ ಪಟ್ಟಣದ ಹೃದಯ ಭಾಗದಲ್ಲಿರುವ ಮೆಟ್ರಿಕ್ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹೋಂ ಕ್ವಾರಂಟೈನ್ ಮಾಡಲು ಆಗಮಿಸಿದಾಗ ಪಟ್ಟಣದ ಹೃದಯ ಭಾಗದಲ್ಲಿ ಹೋಂ ಕ್ವಾರಂಟೈನ್ ಬೇಡವೇ ಬೇಡ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಟಿ.ನರಸೀಪುರ ತಾಲೂಕಿನ ನಾಲ್ವರು ಹೊರ ರಾಜ್ಯದಿಂದ ಆಗಮಿಸಿದ ಪರಿಣಾಮ ಹೋಂ ಕ್ವಾರಂಟೈನ್ ಮಾಡಲು ತಾಲೂಕು ಆಡಳಿತ ಮುಂದಾಗಿರುವ ವಿಷಯ ತಿಳಿದು ಸ್ಥಳೀಯರು ಸ್ಥಳಕ್ಕೆ ಜಮಾಯಿಸಿದ್ರು. ಈಗಾಗಲೇ ಭಯದಿಂದ ಜೀವನ ನಡೆಸುತ್ತಿದ್ದೇವೆ. ಕೂಡಲೇ ಹೋಂ ಕ್ವಾರಂಟೈನ್ ಮಾಡ ಹೊರಟಿರುವ ಜನರ ಸ್ಥಳಾಂತರ ಮಾಡುವಂತೆ ನರಸೀಪುರ ತಹಶೀಲ್ದಾರ್ ನಾಗೇಶ್ ಅವರಿಗೆ ಸ್ಥಳೀಯರು ಮನವಿ ಮಾಡಿದರು.