ಮೈಸೂರು:ಖಾಲಿ ಪೈಪ್ನಲ್ಲಿ ಸಿಲುಕಿಕೊಂಡಿರುವ ಚಿರತೆಯನ್ನು ರಕ್ಷಿಸಲು ಅರಣ್ಯಾಧಿಕಾರಿಗಳು ಆಗಮಿಸುತ್ತಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಲಿ ಪೈಪ್ನಲ್ಲಿ ಸಿಲುಕಿಕೊಂಡಿರುವ ಚಿರತೆ: ಸೆರೆ ಹಿಡಿಯದ ಅರಣ್ಯ ಇಲಾಖೆ
ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಹಳೇ ರಾಮನಹಳ್ಳಿ ಗ್ರಾಮದಲ್ಲಿ ಸೋಮವಾರ ಖಾಲಿ ಪೈಪ್ವೊಂದರಲ್ಲಿ ಚಿರತೆ ಸಿಲುಕಿಕೊಂಡಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಆದ್ರೂ ಇದೂವರೆಗೂ ಅರಣ್ಯಾಧಿಕಾರಿಗಳು ಮಾತ್ರ ಹತ್ತಿರ ಸುಳಿದಿಲ್ಲ. ಇದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಹಳೇಳೆ ರಾಮನಹಳ್ಳಿ ಗ್ರಾಮದಲ್ಲಿ ಸೋಮವಾರ ನಾಯಿ ತಿಂದು ಖಾಲಿ ಪೈಪ್ ಒಳಗೆ ಚಿರತೆ ನುಗ್ಗಿತ್ತು. ಚಿರತೆಯನ್ನು ನೋಡಿದ ಗ್ರಾಮಸ್ಥರು, ಪೈಪ್ನ ಎರಡೂ ಕಡೆ ಬಂದ್ ಮಾಡಿ ಚಿರತೆ ಇರುವ ವಿಷಯವನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.
ಸೋಮವಾರದಿಂದಲೂ ನೀರಿನ ಖಾಲಿ ಪೈಪ್ನಲ್ಲೇ ಬಂಧಿಯಾಗಿರುವ ಚಿರತೆಯನ್ನು ರಕ್ಷಣೆ ಮಾಡಿ, ಕಾಡಿಗೆ ಬಿಡುವಂತೆ ಗ್ರಾಮಸ್ಥರು ಮನವಿ ಮಾಡಿದ್ರು. ಆದ್ರೆ ಅರಣ್ಯಾಧಿಕಾರಿಗಳು ಮಾತ್ರ ಹತ್ತಿರ ಸುಳಿದಿರಲಿಲ್ಲ. ಖಾಲಿ ಪೈಪ್ನಿಂದ ಹೊರ ಬರಲು ಚಿರತೆ ಯತ್ನಿಸಿದೆ. ಆದರೆ ಚಿರತೆ ಹೊರ ಬಂದು ಓಡಿ ಹೋದರೆ ನಮ್ಮ ಜಾನುವಾರುಗಳು ಮತ್ತೆ ಅದಕ್ಕೆ ಆಹಾರವಾಗುತ್ತವೆ ಎಂಬ ಆತಂಕ ಗ್ರಾಮಸ್ಥರದ್ದಾಗಿದೆ.