ಕರ್ನಾಟಕ

karnataka

ETV Bharat / state

ಮೈಸೂರು: ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿನಲ್ಲಿ ಸೆರೆ - mysore leopard caught news

ತೆಂಕಲಕೊಪ್ಪಲು ಹಾಗೂ ಮೈದನಹಳ್ಳಿ ಸುತ್ತಮುತ್ತ ಚಿರತೆಯೊಂದು ಕುರಿ, ನಾಯಿಗಳ ಮೇಲೆ ದಾಳಿ ನಡೆಸಿ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಸದ್ಯ ಇದು ಅರಣ್ಯ ಇಲಾಖೆ ಅಧಿಕಾರಿಗಳಿಟ್ಟಿದ್ದ ಬೋನಿಗೆ ಬಿದ್ದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

leopard caught in mysore
ಮೈಸೂರು: ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ

By

Published : Nov 4, 2020, 12:01 PM IST

ಮೈಸೂರು: ಜಾನುವಾರಗಳ ಮೇಲೆ ದಾಳಿ ನಡೆಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿರುವ ಘಟನೆ ಹುಣಸೂರು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ನಡೆದಿದೆ.

ಬೋನಿಗೆ ಬಿದ್ದ ಚಿರತೆ

ತೆಂಕಲಕೊಪ್ಪಲು ಹಾಗೂ ಮೈದನಹಳ್ಳಿ ಸುತ್ತಮುತ್ತ ಚಿರತೆಯೊಂದು ಕುರಿ, ನಾಯಿಗಳ ಮೇಲೆ ದಾಳಿ ನಡೆಸಿ ಗ್ರಾಮದ ಜನರಲ್ಲಿ ಭಯ ಮೂಡಿಸಿತ್ತು ಹಾಗೂ ಸಾಕಷ್ಟು ಉಪಟಳವನ್ನು ನೀಡಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಚಿರತೆ ಸೆರೆಗಾಗಿ ಜಮೀನೊಂದರಲ್ಲಿ ಬೋನನ್ನು ಇರಿಸಿದ್ದರು.

ಸದ್ಯ ಚಿರತೆ ಬೋನಿ​ಗೆ ಬಿದ್ದಿದೆ. ಈ ಚಿರತೆಯನ್ನು ಸುರಕ್ಷಿತವಾಗಿ ನಾಗರಹೊಳೆ ಅರಣ್ಯಕ್ಕೆ ಬಿಡಲಾಗಿದೆ‌.

ABOUT THE AUTHOR

...view details