ಕರ್ನಾಟಕ

karnataka

ETV Bharat / state

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳ್ತಾರೆ.. ಅವರು ಬರ್ತಾರಂತೆ, ಟಚ್‌ನಲ್ಲಿದಾರಂತೆ.. - ಆರ್.ಧ್ರುವನಾರಾಯಣ್ ಹೇಳಿಕೆ

ದೇಶದಲ್ಲಿಯೇ ರಾಜ್ಯ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸಚಿವರು, ಶಾಸಕರೇ ಹೇಳ್ತಿದ್ದಾರೆ. ಹೀಗಾಗಿ, ಇದರಿಂದ ಶಾಸಕರ ನೈತಿಕತೆ ಕುಂದಿದೆ. ಕಾಂಗ್ರೆಸ್ ಸೇರಲು ಆಸಕ್ತಿ ತೋರುತ್ತಿದ್ದಾರೆ..

R Dhruvanrayan Press meet
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್

By

Published : Jul 4, 2021, 11:42 AM IST

Updated : Jul 4, 2021, 12:07 PM IST

ಮೈಸೂರು : ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ನೊಂದಿರುವ ಹಲವು ಶಾಸಕರು ಆ ಪಕ್ಷಗಳನ್ನು ತೊರೆಯಲಿದ್ದಾರೆ. ಅವರೆಲ್ಲ ನನ್ನ ಸಂಪರ್ಕದಲ್ಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದ್ದಾರೆ. ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ‌ಎಸ್‌.ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಅವರ ಭ್ರಷ್ಟಾಚಾರದಿಂದ ಬಿಜೆಪಿ ಶಾಸಕರ ನೈತಿಕ ಶಕ್ತಿ ಕುಗ್ಗಿದೆ.

ಅನ್ಯ ಪಕ್ಷದ ನಾಯಕರು ಕೈಹಿಡೀತಾರಂತೆ.. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಪ್ರತಿಕ್ರಿಯೆ..

ಕೆಲ ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲು ಯತ್ನಿಸುತ್ತಿದ್ದಾರೆ. ಮೈಸೂರು ಭಾಗದ ಜೆಡಿಎಸ್​, ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಅವರ ಹೆಸರುಗಳನ್ನು ಈಗಲೇ ಬಹಿರಂಗಪಡಿಸುವುದಿಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷರು ಪಕ್ಷಕ್ಕೆ ಬರುವವರನ್ನು ಆಹ್ವಾನಿಸಿದ್ದಾರೆ. ಪಕ್ಷಕ್ಕೆ ಬರುವವರ ಬಗ್ಗೆ ಅಲ್ಲಂ‌ ವೀರಭದ್ರಪ್ಪ‌ ಸಮಿತಿ ಪರಿಶೀಲನೆ ಮಾಡುತ್ತದೆ.

ರಾಜ್ಯದಲ್ಲಿ ಬಿಜೆಪಿ ವೈಫಲ್ಯ ಸಾಕಷ್ಟಿದೆ. ಬಿಎಸ್‌ವೈ‌ ಸುವರ್ಣಾವಕಾಶ ಕಳೆದುಕೊಂಡಿದ್ದಾರೆ. ಭ್ರಷ್ಟಾಚಾರ ಆರೋಪ ಇದ್ದರೂ, ಸಿಎಂ ಬದಲಾವಣೆ ಮಾಡುತ್ತಿಲ್ಲ. ಹೈಕಮಾಂಡ್ ಬೆಂಬಲ‌ ಇಲ್ಲದೆ ಯತ್ನಾಳ್​, ಹೆಚ್‌ ವಿಶ್ವನಾಥ್ ಮಾತನಾಡ್ತಿಲ್ಲ. ಹೈಕಮಾಂಡ್​ ಹೇಳಿ ಕೊಟ್ಟು ಯತ್ನಾಳ್‌ರಿಂದ ಮಾತನಾಡಿಸುತ್ತಿದೆ ಎಂದು ಹೇಳಿದರು.

ಓದಿ : ತಟಸ್ಥವಾಗಿದ್ದ ಜೆಡಿಎಸ್​​ನ ಮುಂದಿನ 'ಆಟ' ಏನು?

ದೇಶದಲ್ಲಿಯೇ ರಾಜ್ಯ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸಚಿವರು, ಶಾಸಕರೇ ಹೇಳ್ತಿದ್ದಾರೆ. ಹೀಗಾಗಿ, ಇದರಿಂದ ಶಾಸಕರ ನೈತಿಕತೆ ಕುಂದಿದೆ. ಕಾಂಗ್ರೆಸ್ ಸೇರಲು ಆಸಕ್ತಿ ತೋರುತ್ತಿದ್ದಾರೆ ಎಂದರು.

ಜಿಪಂ, ತಾಪಂ‌ ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗಿದೆ. ಕೊರೊನಾ ನಿಯಂತ್ರಣಕ್ಕೆ ಕಾಂಗ್ರೆಸ್ ಹಲವಾರು ಕಾರ್ಯಕ್ರಮ ರೂಪಿಸಿದೆ. ಗ್ರಾಪಂ ಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದಾರೆ. ಜಿಪಂ, ತಾಪಂನಲ್ಲೂ ಬಹುಮತಗಳಿಸುವ ವಿಶ್ವಾಸವಿದೆ ಎಂದು ಹೇಳಿದರು.

Last Updated : Jul 4, 2021, 12:07 PM IST

ABOUT THE AUTHOR

...view details