ಮೈಸೂರು:ಕರ್ನಾಟಕ ರಾಜ್ಯ ಪುರೋಹಿತರು ಹಾಗೂ ಜ್ಯೋತಿಷಿಗಳಿಗೆ ಎರಡು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದ್ದು, ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಚಾಲನೆ ನೀಡಿದರು.
ನಗರದ ರೈಲ್ವೆ ವರ್ಕ್ ಶಾಪ್ ಮೈದಾನದಲ್ಲಿ ರಾಜ್ಯ ಮಟ್ಟದ ಕರ್ನಾಟಕ ಪುರೋಹಿತ ಹಾಗೂ ಜ್ಯೋತಿಷಿಗಳಿಗೆ ಎರಡು ದಿನಗಳ ಕಾಲ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಏರ್ಪಡಿಸಲಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ಪಟು ಜಾವಗಲ್ ಶ್ರೀನಾಥ್ ಅವರು ಬ್ಯಾಟ್ ಮಾಡುವ ಮೂಲಕ ಚಾಲನೆ ನೀಡಿದರು.
ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಖ್ಯಾತ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಚಾಲನೆ ನೀಡಿದ್ರು. ಜಾವಗಲ್ ಶ್ರೀನಾಥ್ ಮಾತನಾಡಿ, ಪುರೋಹಿತ ಹಾಗೂ ಜ್ಯೋತಿಷಿಗಳು ಪ್ರತಿನಿತ್ಯ ಪೂಜೆ-ಪುನಸ್ಕಾರಗಳನ್ನು ಮಾಡುವ ಮೂಲಕ ಜನರಿಗೆ ದಾರಿ ತೋರಿಸುವಂತಹ ಕೆಲಸ ಮಾಡುವವರು. ನೀವು ಕ್ರಿಕೆಟ್ ಆಡುವಾಗ ಅಷ್ಟೇ ಶ್ರದ್ಧೆಯಿಂದ, ಭಯವಿಲ್ಲದಂತೆ ಆಟ ಆಡಿ. ಇದು ಎಲ್ಲರನ್ನೂ ಒಗ್ಗೂಡಿಸುವ ಜೊತೆಗೆ ನಿಮ್ಮಲ್ಲೂ ಆತ್ಮವಿಶ್ವಾಸವನ್ನು ಉಂಟು ಮಾಡುತ್ತದೆ ಎಂದು ಹುರಿದುಂಬಿಸಿದರು.
ಇಂದು ಮತ್ತು ನಾಳೆ ಪಂದ್ಯಾವಳಿ ನಡೆಯಲಿದೆ. ಈ ಟೂರ್ನಿಯಲ್ಲಿ ಸುಮಾರು 16 ತಂಡಗಳು ಭಾಗವಹಿಸಲಿವೆ.