ಕರ್ನಾಟಕ

karnataka

ETV Bharat / state

ಇಂಡೋ-ಆಸೀಸ್ ಪಂದ್ಯದಲ್ಲಿ 'ರಿಷಬ್'​​ ಆಟ ಸೂಪರ್​ ಆಗಿತ್ತಂತೆ...ಹರ್ಷಿಕಾ ಪೂಣಚ್ಚ ಹೇಳಿದ್ದಾರೆ ನೀವೇ ನೋಡಿ...

ಪಾಕಿಸ್ತಾನಕ್ಕೆ ಯಾವೊಂದು ದೇಶವೂ ಬೆಂಬಲ ನೀಡಬಾರದು ಎಂದು ಹೇಳಿದ್ದಾರೆ. ಟೀ ಇಂಡಿಯಾದಲ್ಲಿ ಎಲ್ಲ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಈ ಬಾರಿ ವಿಶ್ವಕಪ್​ ಗೆಲ್ಲುವ ನಂಬಿಕೆ ನನಗಿದೆ ಎಂದೂ ಭರವಸೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಕೆ.ಎಲ್.ರಾಹುಲ್ ಕೂಡ ಉತ್ತಮವಾಗಿ ಆಡಲಿ. ಇಂಡಿಯಾ ಗೆದ್ದು ಬರಲಿ ಎಂದು ಶುಭ ಹಾರೈಸಿದ್ದಾರೆ.

ಹರ್ಷಿಕಾ ಪೂಣಚ್ಚ

By

Published : Jun 15, 2019, 7:39 PM IST

ಮೈಸೂರು:ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಜರುಗಿದ ಪಂದ್ಯದಲ್ಲಿ ರಿಷಬ್​ ಅವರ ಆಟ ಸೂಪರ್​ ಆಗಿತ್ತು ಎಂದು ನಟಿ ಹರ್ಷಿಕಾ ಪೂಣಚ್ಚ ಅವರು ತಪ್ಪಾಗಿ ಹೇಳುವ ಮೂಲಕ ಟ್ರೊಲ್​ಗೆ ಗುರಿಯಾಗಿದ್ದಾರೆ.

ಈಟಿವಿ ಭಾರತ್​ ಜೊತೆಗೆ ಮಾತನಾಡಿದ ನಟಿ ಹರ್ಷಿಕಾ ಪೂಣಚ್ಚ

ಜೂನ್​ 9ರಂದು ನಡೆದ ಇಂಡೋ-ಆಸೀಸ್ ಪಂದ್ಯದಲ್ಲಿ ಶಿಖರ್ ಧವನ್ ಶತಕ ಸಿಡಿಸುವ ಮೂಲಕ​ ಉತ್ತಮ ಪ್ರದರ್ಶನ ತೋರಿದ್ದರು. ಜೊತೆಗೆ ವಿರಾಟ್​ ಕೊಹ್ಲಿ ಅವರ ಅರ್ಧಶತಕ ಮತ್ತು ಹಾರ್ದಿಕ್​ ಪಾಂಡ್ಯ ಬಿರುಸಿನ ಆಟ ಆಡಿದ್ದರು. ಅಲ್ಲದೆ, ರಿಷಬ್​ ಪಂತ್​ಗೆ ವಿಶ್ವಕಪ್​ಗೆ ಅವಕಾಶವೇ ನೀಡಿರಲಿಲ್ಲ. ಅಂದಿನ ಪಂದ್ಯದಲ್ಲಿ ಧವನ್​ ಗಾಯಗೊಂಡ ಬಳಿಕ ರಿಷಬ್​ಗೆ ಆಹ್ವಾನ ನೀಡಲಾಗಿದೆ.

ಈ‌ಟಿವಿ ಭಾರತ್​ಗೆ ನೀಡಿದ ಸಂದರ್ಶನದಲ್ಲಿ ನಾಳೆ (ಜೂನ್​ 16) ಪಾಕಿಸ್ತಾನ ಮತ್ತು ಭಾರತದ ನಡುವೆ ಜರುಗುವ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಲ್​ ದಿ ಬೆಸ್ಟ್​ ಹೇಳಿದ ಬಳಿಕ ಈ ರೀತಿ ತಪ್ಪು ಹೇಳಿಕೆ ನೀಡಿದ್ದಾರೆ ನಟಿ ಹರ್ಷಿಕಾ ಪೂಣಚ್ಚ. ಈ ಮೂಲಕ ಕ್ರಿಕೆಟ್​ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಯಾರ ಮೇಲೆ ಹೆಚ್ಚಿನ ನಿರೀಕ್ಷೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರೂ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ಮೊನ್ನೆ ಕೂಡ ರಿಷಬ್​ ಅವರು ಚೆನ್ನಾಗಿ ಆಡಿದ್ದಾರೆ ಎಂದು ಹೇಳಿದ್ದಾರೆ. ವಿಶ್ವಕಪ್ ಗೆಲ್ಲುವ ಫೆವರೇಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಕೂಡ ಒಂದು. ಭಾರತ-ಪಾಕಿಸ್ತಾನದ ನಡುವೆ ನಾಳೆ ನಡೆಯಲಿರುವ ಹೈವೋಲ್ಟೇಜ್​​ ಪಂದ್ಯದಲ್ಲಿ ಭಾರತವೇ ಜಯಭೇರಿಯಾಗಲಿದೆ. ಆಲ್ ದಿ ಬೆಸ್ಟ್ ಇಂಡಿಯಾ, ಗೆದ್ದು ಬನ್ನಿ ಎಂದು ಶುಭ ಹಾರೈಸಿದ್ದಾರೆ.

ವಿಂಗ್​ ಕಮಾಂಡರ್​ ಅಭಿನಂದನ್​ಗೆ ಚಿತ್ರಹಿಂಸೆ ಕೊಟ್ಟಿರುವುದನ್ನು ನಾವು ಇನ್ನೂ ಮರೆತಿಲ್ಲ. ಇದನ್ನು ಎಲ್ಲ ಆಟಗಾರರು ಮನಸ್ಸಿನಲ್ಲಿಟ್ಟುಕೊಂಡು ಆಡಬೇಕು. ಪಾಕಿಸ್ತಾನವನ್ನು ವಿಶ್ವಕಪ್​ನಲ್ಲಿ ಭಾಗವಹಿಸದಂತೆ ಬಹಿಷ್ಕಾರ ಮಾಡಬೇಕು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದೆ. ಆದರೆ, ಬಿಸಿಸಿಐ ಅದಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details