ಕರ್ನಾಟಕ

karnataka

ETV Bharat / state

ಹಸುಗಳ ಅಕ್ರಮ ಸಾಗಣೆ: ಬೆಟ್ಟದಪುರ ಬಳಿ ಇಬ್ಬರ ಬಂಧನ - ಬೆಟ್ಟದಪುರ ಪೊಲೀಸ್​ ಠಾಣೆ

ಅಕ್ರಮವಾಗಿ ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಬೆಟ್ಟದಪುರ ಪೊಲೀಸ್​ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Illegal cow shipping
Illegal cow shipping

By

Published : Jun 23, 2020, 1:51 PM IST

ಮೈಸೂರು:ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ ವಾಹನವನ್ನು ವಶಪಡಿಸಿಕೊಂಡು ಹಸುಗಳನ್ನ ರಕ್ಷಿಸಿದ್ದಾರೆ.

ಜಿಲ್ಲೆಯ ಬೆಟ್ಟದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅತ್ತಿಗೂಡು ಗ್ರಾಮದಲ್ಲಿ ಅಕ್ರಮವಾಗಿ ಮೂರು ಹಸು ಮತ್ತು 25 ಕರುಗಳನ್ನು ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಹಸುಗಳನ್ನು ರಕ್ಷಣೆ ಮಾಡಿ, ಆರೋಪಿಗಳಾದ ರೋಷನ್ ಷರೀಫ್, ಅಹಮದ್ ಹುಸೇನ್ ಎಂಬುವರನ್ನು ಬಂಧಿಸಿದ್ದಾರೆ.

ವಾಹನವನ್ನು ವಶಪಡಿಸಿಕೊಂಡಿದ್ದು, ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details