ಕರ್ನಾಟಕ

karnataka

ETV Bharat / state

ಮಳೆ ಆರ್ಭಟಕ್ಕೆ ಮನೆ ಕುಸಿತ.. ಪ್ರಾಣಾಪಾಯದಿಂದ ಪಾರಾದ ವೃದ್ಧ ದಂಪತಿ - ETV Bharat Kannada

ವೃದ್ಧ ದಂಪತಿಯ ಮನೆ ಕೋಣೆಯ ಗೋಡೆ ಹೊರಭಾಗಕ್ಕೆ ಕುಸಿದುಬಿದ್ದಿದೆ. ಒಂದು ವೇಳೆ ಗೋಡೆಯು ಕೋಣೆಯ ಒಳಭಾಗಕ್ಕೆ ಬಿದ್ದಿದ್ದರೆ ಪ್ರಾಣ ಹಾನಿಯಾಗುತ್ತಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ.

House collapsed due to rain
ಮಳೆ ಆರ್ಭಟಕ್ಕೆ ಮನೆ ಕುಸಿತ

By

Published : Aug 29, 2022, 1:12 PM IST

Updated : Aug 29, 2022, 1:23 PM IST

ಮೈಸೂರು: ವರುಣನ ಆರ್ಭಟಕ್ಕೆ ನಂಜನಗೂಡು ತಾಲೂಕಿನ ಆಲಂಬೂರು ಮುಂಟಿ ಗ್ರಾಮದಲ್ಲಿ ಮನೆ ಕುಸಿದು ಬಿದ್ದು, ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ವರುಣ ವಿಧಾನಸಭಾ ಕ್ಷೇತ್ರದ ಆಲಂಬೂರು ಮುಂಟಿ ಗ್ರಾಮದ ಗೌರಮ್ಮ ಬಸವೇಗೌಡ ಎಂಬವರಿಗೆ ಸೇರಿದ ವಾಸದ ಮನೆಯ ಒಂದು ಕೋಣೆಯ ಗೋಡೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಹೊರಭಾಗಕ್ಕೆ ಕುಸಿದುಬಿದ್ದಿದೆ. ಈ ವೇಳೆ ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮಳೆ ಆರ್ಭಟಕ್ಕೆ ಮನೆ ಕುಸಿತ

ಒಂದು ವೇಳೆ ಗೋಡೆಯು ಕೋಣೆಯ ಒಳಭಾಗಕ್ಕೆ ಬಿದ್ದಿದ್ದರೆ ಪ್ರಾಣ ಹಾನಿಯಾಗುತ್ತಿತ್ತು. ಮಳೆಯ ರಭಸದಿಂದ ನಾವು ಮತ್ತೊಂದು ಕೋಣೆಗೆ ಹೋದ ಕಾರಣ ಅನಾಹುತ ತಪ್ಪಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಬಡತನದಲ್ಲಿರುವ ಈ ಕುಟುಂಬದ ನೆರವಿಗೆ ಸಂಬಂಧಪಟ್ಟಂತಹ ಅಧಿಕಾರಿಗಳು ಬರಬೇಕಿದೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಸರ್ಕಾರದಿಂದ ಕೂಡಲೇ ಅವರಿಗೆ ಪರಿಹಾರವನ್ನು ಕೊಡಬೇಕು ಎಂದು ಸಂತ್ರಸ್ತರ ಸಂಬಂಧಿಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ :ಮುಂದುವರೆಯಲಿರುವ ವರ್ಷಧಾರೆ: ರಾಜ್ಯದ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

Last Updated : Aug 29, 2022, 1:23 PM IST

ABOUT THE AUTHOR

...view details