ಕರ್ನಾಟಕ

karnataka

ETV Bharat / state

ಶ್ವಾನದಳದ ಹೀರೋ ಇನ್ನಿಲ್ಲ: ಸರ್ಕಾರಿ ಗೌರವದೊಂದಿಗೆ ಅಂತಿಮ‌ ಸಂಸ್ಕಾರ

2011ರ ಏಪ್ರಿಲ್ 4ರಂದು ಸೂಕ್ತ ತರಬೇತಿಯೊಂದಿಗೆ ಈ ನಾಯಿ ಇಲಾಖೆಗೆ ಸೇರಿತ್ತು. ಈ ಶ್ವಾನವು ಹಲವು ಡಾಗ್ ಶೋ, ಮಾಕ್ ಡ್ರಿಲ್ (ಅಣಕು ಕಾರ್ಯಾಚರಣೆ)ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿತ್ತು.

Funeral to the police dog
ಸರ್ಕಾರಿ ಗೌರವದೊಂದಿಗೆ ಅಂತಿಮ‌ ಸಂಸ್ಕಾರ

By

Published : Apr 16, 2021, 8:47 PM IST

ಮೈಸೂರು: ನಗರ ಪೊಲೀಸ್ ಘಟಕದ ಶ್ವಾನದಳದಲ್ಲಿ ಮಾದಕ ದ್ರವ್ಯ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ 'ಹಿರೋ'ಎಂಬ ಹೆಸರಿನ ಲ್ಯಾಬ್ರಡಾರ್ ಶ್ವಾನ ಶುಕ್ರವಾರ ಮೃತಪಟ್ಟಿದೆ.

2011ರ ಏಪ್ರಿಲ್ 4ರಂದು ಸೂಕ್ತ ತರಬೇತಿಯೊಂದಿಗೆ ಇಲಾಖೆಗೆ ಸೇರಿದ್ದು, ಈ ಶ್ವಾನವು ಹಲವು ಡಾಗ್ ಶೋ, ಮಾಕ್ ಡ್ರಿಲ್ (ಅಣಕು ಕಾರ್ಯಾಚರಣೆ)ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರೊಂದಿಗೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದೆ.

ಸರ್ಕಾರಿ ಗೌರವದೊಂದಿಗೆ ಅಂತಿಮ‌ ಸಂಸ್ಕಾರ

ಪೇದೆ ಬಿ.ಎಸ್.ಸುನಿಲ್ ಕುಮಾರ್ ಅವರು ಹೀರೋ ಶ್ವಾನ ತರಬೇತುದಾರರಾಗಿದ್ದರು. ಈ ಶ್ವಾನವು ಇಲಾಖೆಯಲ್ಲಿ ಸುಮಾರು 10 ವರ್ಷ 12 ದಿನಗಳು ಯಶಸ್ವಿಯಾಗಿ ಸೇವೆ ಸಲ್ಲಿಸಿ, ವಯೋ ಸಹಜ ಖಾಯಿಲೆಯಿಂದ ಮೃತಪಟ್ಟಿದೆ.

ಸಿಎಆರ್ ಡಿಸಿಪಿ‌ ಶಿವರಾಜು ಅವರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನಗಳನ್ನು ನೆರವೆರಿಸಲಾಯಿತು.

ABOUT THE AUTHOR

...view details