ಮೈಸೂರು:ಗಂಧದ ಕಡ್ಡಿ ಕಿಡಿಯಿಂದ ಅಂಗಡಿಯೇ ಸುಟ್ಟು ಹೋದ ಘಟನೆ ನಗರದ ದೇವರಾಜ ಮಾರುಕಟ್ಟೆಯಲ್ಲಿ ನಡೆದಿದೆ.
ಇಡೀ ಅಂಗಡಿಯನ್ನೇ ಸುಟ್ಟ ಗಂಧದಕಡ್ಡಿ ಕಿಡಿ: ದೇವರಾಜ ಮಾರುಕಟ್ಟೆಯಲ್ಲಿ ಅವಘಡ - Devaraja market
ಪೂಜಾ ಸಾಮಗ್ರಿ ಮಾರುವ ಅಂಗಡಿಯಲ್ಲಿ ಹತ್ತಿದ್ದ ಗಂಧದ ಕಡ್ಡಿ ಕಿಡಿ ಆಕಸ್ಮಿಕವಾಗಿ ಬಿದ್ದು, ಇಡೀ ಅಂಗಡಿಯೇ ಹೊತ್ತಿ ಉರಿದ ಘಟನೆ ನಗರದ ದೇವರಾಜ ಮಾರುಕಟ್ಟೆಯಲ್ಲಿ ನಡೆದಿದೆ.
ನಗರದ ದೇವರಾಜ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ ಮಾರುವ ಅಂಗಡಿಯಲ್ಲಿ ಹತ್ತಿದ್ದ ಗಂಧದ ಕಡ್ಡಿ ಕಿಡಿ ಆಕಸ್ಮಿಕವಾಗಿ ಬಿದ್ದು, ಇಡೀ ಅಂಗಡಿಯೇ ಹೊತ್ತಿ ಉರಿದಿದೆ. ಈ ಬೆಂಕಿ ಅಕ್ಕಪಕ್ಕದ ಎರಡು ಮಳಿಗೆಗಳನ್ನು ಆವರಿಸಿದ್ದು, ಆ ಅಂಗಡಿಗಳು ಸಹ ಭಾಗಶಃ ಹಾನಿಗೊಳಗಾಗಿವೆ.
ಆಗ್ನಿಶಾಮಕ ಸಿಬ್ಬಂದಿ ಬಂದರೂ, ಬೆಂಕಿ ಹೊತ್ತಿಕೊಂಡ ಸ್ಥಳಕ್ಕೆ ಹೋಗಲು ಇಕ್ಕಟ್ಟಾದ ಜಾಗವಿದ್ದ ಕಾರಣ ತಕ್ಷಣ ಹೋಗಲಾಗಲಿಲ್ಲ. ಅಷ್ಟೊತ್ತಿಗೆ 1 ಅಂಗಡಿ ಸಂಪೂರ್ಣ ಸುಟ್ಟುಹೋಗಿದೆ. ಆದರೂ ಆಗ್ನಿಶಾಮಕ ವಾಹನ ಹೆಚ್ಚಿನ ಅನಾಹುತ ಆಗದ ರೀತಿ ಅಪಾಯ ತಪ್ಪಿಸಿದೆ. 100 ವರ್ಷ ಹಳೆಯದಾದ ಈ ಪಾರಂಪರಿಕ ಕಟ್ಟಡ ಶಿಥಿಲಾವಸ್ಥೆಯಲ್ಲಿ ಇರುವುದು ಘಟನೆಗೆ ಕಾರಣ ಎನ್ನುತ್ತಾರೆ ಸ್ಥಳೀಯ ವರ್ತಕರು.