ಕರ್ನಾಟಕ

karnataka

ETV Bharat / state

ಕಬಿನಿಯಲ್ಲಿ ಕಾಡಿನ ಫೋಟೋ ಪುಸ್ತಕ ಬಿಡುಗಡೆ ಮಾಡಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್ - kabini forest photo book released news

ಸಫಾರಿ ಹೋಗುವಾಗ ಸೆರೆ ಹಿಡಿದಿರುವ ಅದ್ಭುತ ಫೋಟೋಗಳನ್ನು ಪುಸ್ತಕದಲ್ಲಿ ಹೊರತರಲಾಗಿದ್ದು, 'Stripes and Rosetts of Kabini ' ಎಂಬ ಹೆಸರಿನ ಈ ಪುಸ್ತಕವನ್ನು ಸ್ಯಾಂಡಲ್​ವುಡ್​ ನಟ ದರ್ಶನ್ ಕಬಿನಿಯಲ್ಲಿ ಬಿಡುಗಡೆ ಮಾಡಿದ್ದಾರೆ.

darshan releases forest photo book in kabini
ಕಾಡಿನ ಫೋಟೋ ಪುಸ್ತಕ ಬಿಡುಗಡೆ ಮಾಡಿದ ದರ್ಶನ್

By

Published : Oct 19, 2021, 4:26 PM IST

ಮೈಸೂರು: ಅರಣ್ಯ ಹಾಗೂ ಕಾಡು ಪ್ರಾಣಿಗಳ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೀತಿ ತೋರುವ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅವರು ಕಾಡಿನ ಫೋಟೋ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಕಾಡಿನ ಫೋಟೋ ಪುಸ್ತಕ ಬಿಡುಗಡೆ ಮಾಡಿದ ದರ್ಶನ್

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ಇಲಾಖೆ ರೆಸಾರ್ಟ್​​ಗಳಲ್ಲಿರುವ ಕೆಲಸ ಮಾಡುವ ನ್ಯಾಚುರಲಿಸ್ಟ್ ಹಾಗೂ ಚಾಲಕರು ಕಾಡಿನಲ್ಲಿ ಸಫಾರಿ ಹೋಗುವಾಗ ಪ್ರಾಣಿಗಳು ಹಾಗೂ ವಾತಾವರಣವನ್ನು ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.

ಇವರೆಲ್ಲ ಸೆರೆ ಹಿಡಿದಿರುವ ಫೋಟೋಗಳ ಪೈಕಿ, ಆಯ್ದ ಫೋಟೋಗಳನ್ನು ಸೆಲೆಕ್ಟ್ ಮಾಡಿ ಪುಸ್ತಕ ರೂಪದಲ್ಲಿ ಮಾಡಿದ್ದಾರೆ. ಈ ಪುಸ್ತಕಕ್ಕೆ 'Stripes and Rosetts of Kabini ' ಎಂದು ಹೆಸರಿಟ್ಟಿದ್ದಾರೆ.

ಪುಸ್ತಕವನ್ನು ಬಿಡುಗಡೆ ಮಾಡಲು ದರ್ಶನ್ ಅವರನ್ನು ಆಹ್ವಾನಿಸಿದಾಗ, ಖುಷಿ ಖುಷಿಯಿಂದಲೇ ಕಬಿನಿಗೆ ತೆರಳಿ, ನಟ ದರ್ಶನ್ ಪುಸ್ತಕ ಬಿಡುಗಡೆ ಮಾಡಿದ್ದಾರೆ.

ABOUT THE AUTHOR

...view details