ಕರ್ನಾಟಕ

karnataka

ETV Bharat / state

ಏತ ನೀರಾವರಿ ಯೋಜನೆಗೆ ಬೆಳೆ ನಾಶ: ರೈತರ ಆಕ್ರೋಶ - crops destroyed in mysore

ಬೆಳೆ ನಾಶ ಮಾಡಿದ್ದನ್ನು ಪ್ರಶ್ನಿಸಿದ ರೈತರಿಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ. ಮೈಸೂರು ತಾಲೂಕಿನ ಚುಂಚನಗಿರಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ರೈತರ ಜಮೀನಿನ ಬೆಳೆ ನಾಶ ಮಾಡಲಾಗಿದೆ ಎಂದು ರೈತ ನಂಜುಂಡಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

crops destroyed due to irrigation project in mysore
ಏತ ನೀರಾವರಿ ಯೋಜನೆಗೆ ಬೆಳೆ ನಾಶ ಮಾಡುತ್ತಿರುವುದು

By

Published : Mar 19, 2020, 6:34 PM IST

ಮೈಸೂರು: ಹೆಚ್​.ಡಿ.ಕೋಟೆ ತಾಲೂಕಿನ ಕರಿಗಾಲ ಗ್ರಾಮದ ಬಳಿ ನಿರ್ಮಿಸುತ್ತಿರುವ ಏತ ನೀರಾವರಿ ಯೋಜನೆಯ ಪೈಪ್​ಲೈನ್ ಕಾಮಗಾರಿ ವೇಳೆ ಅಧಿಕಾರಿಗಳು ರೈತರ ಬೆಳೆ ನಾಶ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಏತ ನೀರಾವರಿ ಯೋಜನೆಗೆ ಬೆಳೆ ನಾಶ ಮಾಡುತ್ತಿರುವುದು

ಬೆಳೆ ನಾಶ ಮಾಡಿದ್ದನ್ನು ಪ್ರಶ್ನಿಸಿದ ರೈತರಿಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ. ಮೈಸೂರು ತಾಲೂಕಿನ ಚುಂಚನಗಿರಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ರೈತರ ಜಮೀನಿನ ಬೆಳೆ ನಾಶ ಮಾಡಲಾಗಿದೆ ಎಂದು ರೈತ ನಂಜುಂಡಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರಿಗೆ ಯಾವುದೇ ನೋಟಿಸ್ ನೀಡಿಲ್ಲ. ಏಕಾಏಕಿ ಜಮೀನಿನಲ್ಲಿ ಬೆಳೆದು ನಿಂತ ಫಸಲನ್ನು ಜೆಸಿಬಿ ಮೂಲಕ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಾಳು ಮಾಡಿದ್ದಾರೆ. ಪರಿಹಾರ ಕೇಳಿದರೆ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಲಾಗಿದೆ. ಇದರಿಂದ ರೈತರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ABOUT THE AUTHOR

...view details