ಮೈಸೂರು: ನಾಡಹಬ್ಬ ದಸರಾ ಯಶಸ್ವಿಗೊಳಿಸಲು ಆಗಮಿಸಿರುವ ಗಜಪಡೆಯ ಸುತ್ತಮುತ್ತಲಿನ ಜಾಗಗಳಿಗೆ ಸ್ಯಾನಿಟೈಸ್ ಮಾಡಲಾಗಿದ್ದು, ಕೊರೊನಾ ಹರಡಂದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ.
ಕೊರೊನಾ ಎಫೆಕ್ಟ್: ಗಜಪಡೆ ತಂಗಿರುವ ಸ್ಥಳದಲ್ಲಿ ಸ್ಯಾನಿಟೈಸೇಶನ್ - ಆನೆ ದಸರಾ
ದಸರಾ ಹಬ್ಬದ ಅಂಗವಾಗಿ ಮೈಸೂರು ಅರಮನೆಗೆ ಗಜಪಡೆ ಆಗಮಿಸಿದ್ದು, ಕೊರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆನೆಗಳು ತಂಗಿರುವ ಪ್ರದೇಶದಲ್ಲಿ ಸ್ಯಾನಿಟೈಸ್ ಮಾಡಲಾಯಿತು.
ಸ್ಯಾನಿಟೈಸ್ ಮಾಡುತ್ತಿರುವ ಸಿಬ್ಬಂದಿ
ಗಜಪಡೆ ಕ್ಯಾಪ್ಟನ್ ಅಭಿಮನ್ಯು, ಗೋಪಿ, ವಿಕ್ರಮ, ಕಾವೇರಿ, ವಿಜಯ ಆನೆಗಳಿರುವ ಸ್ಥಳದ ಸುತ್ತ ಸ್ಯಾನಿಟೈಸ್ ಮಾಡಿಸಲಾಗಿದ್ದು, ಮಾವುತರು ಹಾಗೂ ಕಾವಾಡಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಹೊರತುಪಡಿಸಿ ಇತರರಿಗೆ ಈ ಪ್ರದೇಶಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ವನ್ಯಜೀವಿ ವಿಭಾಗದ ಡಿಸಿಎಫ್ ಅಲೆಗ್ಸಾಂಡರ್, ಈ ಬಾರಿ ಆನೆಗಳ ತೂಕವನ್ನು ಮಾಡಲಾಗಿಲ್ಲ. ಜಂಬೂ ಸವಾರಿ ಮುಗಿಸಿ ಹೋಗುವಾಗ ತೂಕ ಪರೀಕ್ಷೆ ಮಾಡಲಾಗುವುದು. ಆನೆಗಳ ಸುತ್ತ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸ್ ಮಾಡಿಸಲಾಗಿದೆ ಎಂದರು.