ಮೈಸೂರು:ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಇಡಿ ಅಧಿಕಾರಿಗಳು ಚಿದಂಬರಂ ಅವರನ್ನು ಬಂಧಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು ಎಂದು ನೂತನ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಚಿದಂಬರಂ ಬಂಧನ ಹಿನ್ನೆಲೆ ಕಾಂಗ್ರೆಸ್ ರಾಜಕೀಯ ಮಾಡಬಾರದು: ಆರ್.ಅಶೋಕ್ - r.ashok
ಚಿದಂಬರಂ ಅವರ ಮೇಲೆ ಬಹುಕೋಟಿ ಹಗರಣದ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಅವರನ್ನು ಕೋರ್ಟ್ ನಿರ್ದೇಶನದಂತೆ ಬಂಧಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ಬಣ್ಣ ಕಟ್ಟಬಾರದು ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮಾತನಾಡಿದ ಅವರು, ಚಿದಂಬರಂ ಅವರ ಮೇಲೆ ಬಹುಕೋಟಿ ಹಗರಣದ ಆರೋಪಗಳಿವೆ. ಕೋರ್ಟ್ ನಿರ್ದೇಶನದಂತೆ ಬಂಧಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ಬಣ್ಣ ಕಟ್ಟಬಾರದು ಎಂದರು.
ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುವಂತೆ ಪಕ್ಷದ ವರಿಷ್ಠರು ಸೂಚಿಸಿದ ಹಿನ್ನೆಲೆಯಲ್ಲಿ ಕೆಲಸ ಮಾಡಲಾಗುತ್ತಿದೆ. ಮೈಸೂರು ಜಿಲ್ಲಾ ಉಸ್ತುವಾರಿಯಾಗಬೇಕು ಎನ್ನುವ ನಿರೀಕ್ಷೆಯಿಲ್ಲ. ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎಂದ ಅವರು, ಸಂಪುಟ ರಚನೆಯಿಂದ ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನ ಶಮನವಾಗಲಿದೆ. ಈಗಾಗಲೇ ಎಲ್ಲರ ಮನವೊಲಿಸುವ ನಡೆಯುತ್ತಿದೆ ಎಂದು ಅವರು ತಿಳಿಸಿದರು.