ಕರ್ನಾಟಕ

karnataka

ETV Bharat / state

ದಸರಾದಲ್ಲಿ ಪಾಲ್ಗೊಳ್ಳಲೇ ಇಲ್ಲ ಕಾಂಗ್ರೆಸ್ ‌ಜೆಡಿಎಸ್ ಶಾಸಕರು... ನಾಡ ಹಬ್ಬದಲ್ಲೂ ಮುನಿಸು - ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲೇ ಇಲ್ಲ ಕಾಂಗ್ರೆಸ್ ‌ಜೆಡಿಎಸ್ ಶಾಸಕರು

ಕಾಂಗ್ರೆಸ್ ಹಾಗೂ ಜಾ.ದಳ ನಾಯಕರು ಸಮ್ಮಿಶ್ರ ಸರ್ಕಾರ ಬಿದ್ದ ನಂತರದಿಂದಲೂ ಬಿಜೆಪಿ ವಿರುದ್ಧ ಕೆಂಡಕಾರುತ್ತಿರುವ ಜಾ.ದಳ ಹಾಗೂ ಕಾಂಗ್ರೆಸ್ ಮುಖಂಡರು ಗಜಪಯಣ ಆರಂಭದಿಂದಲೂ ಜಂಬೂಸವಾರಿ ಮುಗಿಯುವವರೆಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಅಸಮಾಧಾನ ತೋರಿದ್ದಾರೆ.

ಮೈಸೂರು ದಸರಾ

By

Published : Oct 9, 2019, 11:35 AM IST

ಮೈಸೂರು:ನಾಡ ಹಬ್ಬ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಬೇಕು ಎಂದು ಜನಸಾಗರವೇ ಹರಿದು ಬಂದರೆ, ಇತ್ತ ಮುನಿಸಿಕೊಂಡಿದ್ದ ಕಾಂಗ್ರೆಸ್ ಹಾಗೂ ಜಾ.ದಳ ಮುಖಂಡರು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಹಾಗೂ ಜಾ.ದಳ ನಾಯಕರು ಸಮ್ಮಿಶ್ರ ಸರ್ಕಾರ ಬಿದ್ದ ನಂತರದಿಂದಲೂ ಬಿಜೆಪಿ ವಿರುದ್ಧ ಕೆಂಡಕಾರುತ್ತಿರುವ ಜಾ.ದಳ ಹಾಗೂ ಕಾಂಗ್ರೆಸ್ ಮುಖಂಡರು ಗಜಪಯಣ ಆರಂಭದಿಂದಲೂ ಜಂಬೂಸವಾರಿ ಮುಗಿಯುವವರೆಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಅಸಮಾಧಾನ ತೋರಿದ್ದಾರೆ.

ಕಾಂಗ್ರೆಸ್ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ವಾಸು, ಜಾ.ದಳ ಶಾಸಕರಾದ ಸಾ.ರಾ.ಮಹೇಶ್, ಅಶ್ವಿನ್‌ ಕುಮಾರ್, ಕೆ.ಮಹದೇವ್ ಹಾಗೂ ಜಾ.ದಳ ಹಾಗೂ ಕಾಂಗ್ರೆಸ್ ಮುಖಂಡರು ಕಾರ್ಯಕ್ರಮದಿಂದಲೇ ದೂರು ಸರಿದಿದ್ದಾರೆ.

ದಸರಾ ಪಾಸ್ ವಾಪಸ್ ಕಳುಹಿಸಿದ ಸಾ.ರಾ.ಮಹೇಶ್: ಕೆ.ಆರ್.ನಗರ ತಾಲ್ಲೂಕಿಗೆ ಮಂಜೂರಾತಿ ನೀಡಿದ್ದ 40 ಕೋಟಿ ರೂ.ಅನ್ನು ತಡೆ ಹಿಡಿದಿರುವ ಕಾರಣ, ನಾನು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಶಾಸಕ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಶ್ರೀನಿವಾಸ್ ಪ್ರಸಾದ್ ಗೈರು: ರಾಜ್ಯದಲ್ಲಿ ಹಲವು ಜಿಲ್ಲೆಗಳು ನೆರೆ ಪ್ರವಾಹದಿಂದ ತತ್ತರಿಸಿ ಹೋಗಿರುವಾಗ, ಅದ್ಧೂರಿ ದಸರಾ ಬೇಕೆ ಎಂದು ಸ್ವಪಕ್ಷೀಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ನಾನು ದಸರಾ ಮಹೋತ್ಸದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಕೊಳ್ಳೆಗಾಲದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೇಳಿದ್ದರು. ಅದರಂತೆ ದಸರಾ ಮಹೋತ್ಸವದ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಅಲ್ಲದೇ ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ಅವರು ಕೂಡ ಮಾವನ ಹಾದಿ ಅನುಸರಿಸಿದ್ದಾರೆ.

ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ತನ್ವೀರ್ ಸೇಠ್ ಮಾತ್ರ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ABOUT THE AUTHOR

...view details