ಕರ್ನಾಟಕ

karnataka

ETV Bharat / state

ತಲಕಾಡಿನ ನಿಸರ್ಗಧಾಮ ಪ್ರವಾಸಕ್ಕೆ ಬಂದ ಇಂಜಿನಿಯರ್ ಕಾವೇರಿ ನದಿಯಲ್ಲಿ ಮುಳುಗಿ ಸಾವು

ತಲಕಾಡಿನ ನಿಸರ್ಗಧಾಮದ ಕಾವೇರಿ ನದಿಯಲ್ಲಿ ಈಜಾಡಲು‌ ಹೋಗಿದ್ದಾಗ ಇಂಜಿನಿಯರ್​ ನೀರಿನಲ್ಲಿ ಮುಳುಗಿದ್ದು. ಸ್ನೇಹಿತರು ಹುಡುಕಾಟ ನಡೆಸಿದರೂ ಕಾಣಿಸಿಲ್ಲ. ಬಳಿಕ ಸ್ಥಳೀಯರ ನೆರವಿನಿಂದ ಮೇಲೆತ್ತಿ ಆಸ್ಪತ್ರೆಗೆ ಕೊಂಡೊಯ್ದರೂ ಕೂಡ ಯುವಕ ಮೃತಪಟ್ಟಿದ್ದಾನೆ..

ನೀರಿನಲ್ಲಿ ಮುಳುಗಿ ಇಂಜಿನಿಯರ್ ಸಾವು

By

Published : Dec 20, 2021, 1:42 PM IST

ಮೈಸೂರು :ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಸಿವಿಲ್ ಇಂಜಿನಿಯರ್ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಲಕಾಡು ಬಳಿಯ ಕಾವೇರಿ ನಿಸರ್ಗ ಧಾಮದ ಬಳಿ ಸಂಭವಿಸಿದೆ.

ಕಲಬುರಗಿ ಜಿಲ್ಲೆಯ ಚಂದ್ರಶೇಖರ ಎಂಬುವರ ಮಗ ಧರ್ಮರಾಜ್ (24)ಮೃತಪಟ್ಟ ಇಂಜಿನಿಯರ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಧರ್ಮರಾಜ್ ವಾರಾಂತ್ಯದ ರಜೆ ಹಿನ್ನೆಲೆ ತಮ್ಮ 10 ಮಂದಿ ಸ್ನೇಹಿತರೊಡನೆ ಪ್ರವಾಸಕ್ಕೆಂದು ಮೈಸೂರಿನ ಭಾಗಕ್ಕೆ ಬಂದಿದ್ದರು.

ಮೊದಲು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು, ನಂತರ ತಲಕಾಡಿಗೆ ಬಂದಿದ್ದರು. ನಿಸರ್ಗಧಾಮದ ಕಾವೇರಿ ನದಿಯಲ್ಲಿ ಈಜಾಡಲು‌ ಹೋಗಿದ್ದಾಗ ನೀರಿನಲ್ಲಿ ಮುಳುಗಿದ್ದಾರೆ. ಸ್ನೇಹಿತರು ಹುಡುಕಾಟ ನಡೆಸಿದರೂ ಕಾಣಿಸಿಲ್ಲ.

ನಂತರ ಅಲ್ಲೆ ದೋಣಿ ನಡೆಸುತ್ತಿದ್ದ ಸ್ಥಳೀಯರು ಮುಳುಗುತ್ತಿದ್ದ ಯುವಕನನ್ನು ಮೇಲೆ ಎತ್ತಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಯುವಕ ಮೃತಪಟ್ಟಿರುವ ಬಗ್ಗೆ ವೈದ್ಯರು ಖಚಿತಪಡಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ತಲಕಾಡು ಪೊಲೀಸರು ಪರಿಶೀಲನೆ ನಡೆಸಿ, ಯುವಕನ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಪೋಷಕರು ನೀಡುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ನಿಲ್ಲದ ಕಿಡಿಗೇಡಿಗಳ ಅಟ್ಟಹಾಸ : ಖಾನಾಪುರದಲ್ಲಿ ನಾಡಧ್ವಜ, ಬಸವಣ್ಣನ ಚಿತ್ರಕ್ಕೆ ಅಪಮಾನ

ABOUT THE AUTHOR

...view details