ಮೈಸೂರು: ಚೇಷ್ಟೆ ಮಾಡುತ್ತಿದ್ದ ಪ್ರೀತಿಯ ಬೆಕ್ಕಿಗೆ ಬೈದ ಕಾರಣ ಆ ಬೆಕ್ಕು ಮನೆ ಬಿಟ್ಟು ಹೋಗಿದ್ದು. ಅದನ್ನ ಹುಡುಕಿಕೊಟ್ಟರೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪ್ರಾಣಿಪ್ರಿಯೆ ಸ್ಥಳೀಯ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದಾರೆ.
ತಂದೆ ತಾಯಿ ಮಕ್ಕಳಿಗೆ ಬೈದರೆ ಕೋಪಗೊಂಡು ಮನೆ ಬಿಟ್ಟುಹೋಗುವುದನ್ನ ಕೇಳಿದ್ದೇವೆ. ಆದರೆ, ಮೈಸೂರಿನ ನಾಲ ಬೀದಿಯ ವಿಜಯಲಕ್ಷ್ಮಿಯವರು ಬೆಕ್ಕೊಂದ್ದನ್ನು ಸಾಕಿದ್ದರು. ಆ ಬೆಕ್ಕು ತುಂಬಾ ಚೆಷ್ಟೆ ಮಾಡುತ್ತಿದ್ದು ಇದರಿಂದ ಕೋಪಗೊಂಡ ವಿಜಯಲಕ್ಷ್ಮಿ ಕೆಂಚು ಹಾಗೂ ಬಿಳಿ ಬಣ್ಣದ 8 ತಿಂಗಳ ಗಂಡು ಬೆಕ್ಕಿಗೆ ಬೈದಿದ್ದಾರೆ. ಹೀಗಾಗಿ ಕಳೆದ 18 ದಿನಗಳಿಂದ ಮನೆ ಬಿಟ್ಟು ಬೆಕ್ಕು ಹೋಗಿದೆ. ದಯವಿಟ್ಟು ಬೆಕ್ಕನ್ನ ಹುಡುಕಿಕೊಡಿ ಎಂದು ಸ್ಥಳೀಯ ಪತ್ರಿಕೆಯಲ್ಲಿ ವಿಜಯಲಕ್ಷ್ಮಿ ಜಾಹೀರಾತು ನೀಡಿದ್ದಾರೆ.