ಕರ್ನಾಟಕ

karnataka

ETV Bharat / state

ಬಜೆಟ್ ಮಂಡನೆ ಶಾಸ್ತ್ರವಾಗದೆ, ಜನರಿಗೆ ಅನುಕೂಲಕರವಾಗಿರಲಿ: ಹೆಚ್.ವಿಶ್ವನಾಥ್​​​​​​ - yeddyurappa Budget news

ಯಡಿಯೂರಪ್ಪನವರೇ ಬಜೆಟ್​ ಮೂಲಕ ಮತ್ತಷ್ಟು ಸಾಲ ಜಾಸ್ತಿ ಮಾಡಬೇಡಿ, ಉಳಿತಾಯದ ಬಜೆಟ್ ಮಾಡಿ. ಈ ಹಿಂದೆ ಎಲ್ಲಾ ಮುಖ್ಯಮಂತ್ರಿಗಳು 10 ವರ್ಷದ ಬಜೆಟ್ ಮಾಡಿದ್ದಾರೆ. ನೀವು ಕೇವಲ ಒಂದು ವರ್ಷದ ಬಜೆಟ್ ಮಾಡಿ ಸಾಕು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದರು.

H Vishwanath
ಹೆಚ್.ವಿಶ್ವನಾಥ್

By

Published : Mar 4, 2020, 7:00 PM IST

Updated : Mar 4, 2020, 8:46 PM IST

ಮೈಸೂರು:ಬಜೆಟ್ ಮಂಡನೆ ಕೇವಲ ಶಾಸ್ತ್ರವಾಗಬಾರದು. ಬಜೆಟ್ ಸರ್ಕಾರದ ಜನಪ್ರಿಯತೆ ಹೆಚ್ಚಿಸುವುದಕ್ಕಲ್ಲ. ಜನರ ಅನುಕೂಲಕ್ಕಾಗಿ ಬಜೆಟ್ ಮಾಡಬೇಕು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಸಲಹೆ ನೀಡಿದರು.

ಮಾಜಿ ಸಚಿವ ಹೆಚ್.ವಿಶ್ವನಾಥ್

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರೇ ಬಜೆಟ್​ ಮೂಲಕ ಮತ್ತಷ್ಟು ಸಾಲ ಜಾಸ್ತಿ ಮಾಡಬೇಡಿ, ಉಳಿತಾಯದ ಬಜೆಟ್ ಮಾಡಿ. ಈ ಹಿಂದೆ ಎಲ್ಲಾ ಮುಖ್ಯಮಂತ್ರಿಗಳು 10 ವರ್ಷದ ಬಜೆಟ್ ಮಾಡಿದ್ದಾರೆ. ನೀವು ಕೇವಲ ಒಂದು ವರ್ಷದ ಬಜೆಟ್ ಮಾಡಿ ಸಾಕು ಎಂದು ಹೆಚ್.ವಿಶ್ವನಾಥ್ ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತೆತ್ತಿದರೆ 14 ಬಾರಿ ಬಜೆಟ್ ಮಂಡನೆ ಮಾಡಿದ್ದೇನೆ ಅಂತಾರೆ. ಆದರೆ ಬಜೆಟ್‌ನಲ್ಲಿ ಆರ್ಥಿಕ‌ ಶಿಸ್ತು, ಶಿಷ್ಟಾಚಾರ ತರಲು ಆಗಲಿಲ್ಲ. ರಾಜ್ಯಕ್ಕೆ ಮೂರು ಲಕ್ಷ ಕೋಟಿ ಸಾಲದ ಹೊರೆ ಇದೆ. ಅದರಲ್ಲಿ ಸಿದ್ದರಾಮಯ್ಯ ಅವರದ್ದೇ ಒಂದೂವರೆ ಲಕ್ಷ ಕೋಟಿ ಸಾಲದ ಪಾಲಿದೆ. ಸಿದ್ದರಾಮಯ್ಯ ಪರಮಾಧಿಕಾರದ ಹೆಸರಿನಲ್ಲಿ ಜನರನ್ನು ಸಾಲದ ಶೂಲಕ್ಕೆ ಸಿಲುಕಿಸಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅಂತಾರೆ. ಎರಡು ದಿನ ವಿಧಾನಸಭೆ ಕಲಾಪ ನಡೆಯದಂತೆ ತಡೆ ಮಾಡಿದ್ದೀರಿ. ಏನಿದರ ಅರ್ಥ? ಬರೀ ರಾಜಕೀಯ ಮಾಡೋದಾ? ಜಗಳ ಮಾಡುವುದಕ್ಕೆ ಆರೋಪ ಪ್ರತ್ಯಾರೋಪಕ್ಕಾಗಿ ವಿಧಾನಸಭೆ ಇಲ್ಲ. ಅದು ಜನರ ಹಿತದೃಷ್ಟಿಯ ಚರ್ಚೆಗಾಗಿ ಇರುವುದು. ಇದನ್ನು ಅರಿತು ಪ್ರತಿಪಕ್ಷಗಳು ರಾಜ್ಯದ ಅಭಿವೃದ್ಧಿಯ ವಿಚಾರ ಚರ್ಚೆ ಮಾಡಿ ಎಂದು ಹೇಳಿದರು.

ಬಸನಗೌಡ ಪಾಟೀಲ್ ಯತ್ನಾಳ್​ ಸರಿಯಿಲ್ಲ, ದೊರೆಸ್ವಾಮಿಯೂ ಸರಿಯಿಲ್ಲ. ದೊರೆಸ್ವಾಮಿಯವರು ಒಂದು ಪಕ್ಷದ ಪರವಾಗಿ ಮಾತನಾಡಬಾರದು. ಅವರ ಮೇಲೆ ಎಲ್ಲರಿಗೂ ಅಪಾರ ಗೌರವವಿದೆ. ಅವರು ಎಲ್ಲದಕ್ಕೂ ಬಾಯಿ ಹಾಕಬಾರದು, ತಲೆ ಹಾಕಬಾರದು. ಪಕ್ಷದ ವಕ್ತಾರರಂತೆ ಮಾತನಾಡದೆ, ನಿಮ್ಮ ಗೌರವ ಉಳಿಸಿಕೊಳ್ಳಿ. ರಾಜಕೀಯದ ಕೊಳಚೆಗೆ ಹೋಗಿ ಬೀಳಬೇಡಿ. ರಾಜಕೀಯ ಪಕ್ಷಗಳಿಗೆ ನೀವು ದಾಳವಾಗಬೇಡಿ. ಯಾರ್ಯಾರದೋ ಬಗ್ಗೆ ನೀವು ಏನೇನೋ ಮಾತನಾಡವುದು ಕೂಡ ಸರಿಯಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.

Last Updated : Mar 4, 2020, 8:46 PM IST

ABOUT THE AUTHOR

...view details