ಮೈಸೂರು :ಬಿಜೆಪಿ ಮುಖಂಡನಿಗೆ ಸಂಬಂಧಿಸಿದ ಕಲ್ಯಾಣ ಮಂಟಪದಲ್ಲಿ ಜ್ಯುಬಿಲಿಯಂಟ್ ಕಾರ್ಖಾನೆಯವರು ಬಡಜನರಿಗೆ ವಿತರಿಸಲು ನೀಡಿದ್ದ ಆಹಾರ ಕಿಟ್ಗಳ ಕಂಡು ಬಂದಿತ್ತು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ನಂಜನಗೂಡಿನ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಆಗ್ರಹಿಸಿದ್ದಾರೆ.
ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಕೊರೊನಾ ಸೋಂಕು ಹರಡಿದ್ದ ಹಿನ್ನೆಲೆ ನಂಜನಗೂಡು ತಾಲೂಕನ್ನು ರೆಡ್ ಝೋನ್ ಎಂದು ಘೋಷಿಸಲಾಗಿತ್ತು. ಆಗ ಜ್ಯುಬಿಲಿಯಂಟ್ ಕಾರ್ಖಾನೆ ಬಡವರಿಗೆ ಹಂಚಲೆಂದು ₹50,000 ಆಹಾರದ ಕಿಟ್ಗಳನ್ನು ಬಿಜೆಪಿ ಶಾಸಕ ಹರ್ಷವರ್ಧನ್ ಅವರಿಗೆ ವಹಿಸಿತ್ತು. ಆ ಆಹಾರದ ಕಿಟ್‌ಗಳು ಬಿಜೆಪಿ ಮುಖಂಡನ ಕಲ್ಯಾಣ ಮಂಟಪದಲ್ಲಿ ಪತ್ತೆಯಾಗಿದ್ದರ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಆಗ್ರಹಿಸಿದ್ದಾರೆ.