ಮೈಸೂರು: ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಊಟ ಸಿಗದೇ ನಿರ್ಗತಿಕನೋರ್ವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಕೊರೊನಾ ಕರ್ಫ್ಯೂ : ಸರ್ಕಾರದ ವಿರುದ್ಧ ತಿರುಗಿಬಿದ್ದ ಮೈಸೂರಿನ ನಿರ್ಗತಿಕ - corona curfew
ಕೊರೊನಾ ಕರ್ಫ್ಯೂ ಹಿನ್ನೆಲೆ ತಿನ್ನಲು, ಕುಡಿಯಲು ಏನು ಸಿಗದೇ ಭಿಕ್ಷುಕರು ಕಂಗಾಲಾಗಿದ್ದಾರೆ. ಊಟ ಇಲ್ಲ, ನೀರು ಇಲ್ಲ ನಮ್ಮಂತವರನ್ನು ನೋಡಿಕೊಳ್ಳುವರು ಯಾರು.? ಎಂದು ನಿರ್ಗತಿಕನೋರ್ವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಸರ್ಕಾರದ ವಿರುದ್ಧ ತಿರುಗಿಬಿದ್ದ ಮೈಸೂರಿನ ನಿರ್ಗತಿಕ
ಕಳೆದ ವರ್ಷ ಪ್ರಧಾನಿ ಮೋದಿ ಅವರ ಮಾತು ಕೇಳಿ, ದೀಪ ಹಚ್ಚಿದ್ವಿ, ಜಾಗಟೆ ಬಾರಿಸಿದ್ದೆವು. ಈಗ ರಾಜ್ಯ ಸರ್ಕಾರ ಕೊರೊನಾ ಕರ್ಫ್ಯೂ ಘೋಷಣೆ ಮಾಡಿರುವುದರಿಂದ ಅಂಗಡಿಗಳು ಬಂದ್ ಆಗಿವೆ. ಸಾರ್ವಜನಿಕರು ಆಚೆ ಬಾರದಿರುವುದರಿಂದ ನಮಗೆ ಭಿಕ್ಷೆ ಸಿಗುತ್ತಿಲ್ಲ, ತಿನ್ನಲೂ ಊಟವೂ ಇಲ್ಲದಂತಾಗಿದೆ ಎಂದು ಕಿಡಿಕಾರಿದ್ದಾನೆ.
ಇದರಿಂದ ಊಟ, ಭಿಕ್ಷೆ ಸಿಗದೇ ಇಲ್ಲದೆ ಪರದಾಡುತ್ತಿರುವ ನಿರ್ಗತಿಕನೋರ್ವ ಊಟ ಇಲ್ಲ, ನೀರೂ ಸಿಗುತ್ತಿಲ್ಲ. ನಮ್ಮಂತವರನ್ನು ನೋಡಿಕೊಳ್ಳುವರು ಯಾರು? ಎಲ್ಲವನ್ನು ಮುಚ್ಚಿಸಿದರೆ ನಾವೇನು ಮಾಡುವುದು? ಎಂದು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾನೆ.
Last Updated : Apr 28, 2021, 6:13 PM IST