ಕರ್ನಾಟಕ

karnataka

ETV Bharat / state

ಅರಮನೆಯಲ್ಲಿ ಆಯುಧ ಪೂಜೆ.. ಪಟ್ಟದ ಆನೆ ಕುದುರೆ ಪಲ್ಲಕ್ಕಿ ಸೇರಿ ಐಷಾರಾಮಿ ಕಾರುಗಳಿಗೆ ಪೂಜೆ - mysuru dasara news

ಅರಮನೆಯಲ್ಲಿ ರಾಜವಂಸ್ಥರು ಆಯುಧ ಪೂಜೆ ನೆರವೇರಿಸಿದರು.

ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ
ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ

By

Published : Oct 4, 2022, 12:40 PM IST

Updated : Oct 4, 2022, 4:08 PM IST

ಮೈಸೂರು: ದೇಶದಲ್ಲಿ ಇಂದಿಗೂ ರಾಜ ಪರಂಪರೆಯಂತೆ ಆಯುಧ ಪೂಜೆ ನಡೆಯುವುದು ಮೈಸೂರು ಅರಮನೆಯಲ್ಲಿ. ಇಂದು ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬೆಳಗಿನಿಂದಲೇ ಆಯುಧ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು. ಅರಮನೆಯಲ್ಲಿನ ಆಯುಧ ಪೂಜೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳಗ್ಗೆಯಿಂದಲೇ ಅರಮನೆಯಲ್ಲಿ ಶರನ್ನವರಾತ್ರಿಯ 9ನೇ ದಿನ ಆಯುಧ ಪೂಜೆ ಧಾರ್ಮಿಕ ಕೈಂಕರ್ಯಗಳು ನಡೆದವು. ಬೆಳಗ್ಗೆ 6 ರಿಂದ ಚಂಡಿಕಾ ಹೋಮ ನಡೆದು 9 ಗಂಟೆಗೆ ಹೋಮ ಪೂರ್ಣವತಿ ಆಯಿತು. 10.30 ರ ಸುಮಾರಿಗೆ ಮತ್ತೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವನ್ನು ಆನೆ ಬಾಗಿಲಿಗೆ ತರಲಾಗುತ್ತದೆ. ಆ ನಂತರ ಆನೆ ಬಾಗಿಲಿನ ಮೂಲಕ ಕಲ್ಯಾಣ ಮಂಟಪದ ಒಳಗೆ ತೆರಳಿ ಖಾಸಗಿ ಆಯುಧಗಳಿಗೆ ಪೂಜೆ ಸಲ್ಲಿಸಿದರು. ನಂತರ ರಾಜ ವಂಶಸ್ಥರು ಪಟ್ಟದ ಆನೆ, ಹಸು, ಕುದುರೆ, ಒಂಟೆ, ಪಲ್ಲಕ್ಕಿ ಹಾಗೂ ಅವರು ಬಳಸುವ ಅದ್ಧೂರಿ ಕಾರುಗಳಿಗೆ ಪೂಜೆ ಸಲ್ಲಿಸಿದರು.

ಅರಮನೆಯಲ್ಲಿ ಆಯುಧ ಪೂಜೆ

ಸಮಯ 11.02 ನಿಮಿಷದಿಂದ 11.25ರವರೆಗೆ ಆಯುಧ ಪೂಜೆ ನೆರವೇರಿತು. ಸಂಜೆ ರಾಜ ವಂಶಸ್ಥರು ರತ್ನಖಚಿತ ಸಿಂಹಾಸನದಲ್ಲಿ ಖಾಸಗಿ ದರ್ಬಾರ್ ನಡೆಸಿ ಸಿಂಹಾಸನದಿಂದ ಸಿಂಹವನ್ನು ವಿಸರ್ಜನೆ ಮಾಡುತ್ತಾರೆ. ಆ ನಂತರ ಕಂಕಣ ವಿಸರ್ಜನೆ ಮಾಡಲು ರಾಜ ವಂಶಸ್ಥರು ದೇವರ ಮನೆಗೆ ಬಂದು, ರಾತ್ರಿ ಸಂಪ್ರದಾಯದ ರೀತಿಯಲ್ಲಿ ಅರಮನೆ ಒಳಗಿನ ದೇವರ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಪಟ್ಟದ ಆನೆಗೆ ಪೂಜೆ

(ಪೂಜೆ: ಮಂಜಿನ ನಗರಿ ಮಡಿಕೇರಿ ದಸರಾ ವೈಭವ.. ನಾಡಹಬ್ಬ ನಡೆದು ಬಂದ ಹಾದಿ)

Last Updated : Oct 4, 2022, 4:08 PM IST

ABOUT THE AUTHOR

...view details