ಕರ್ನಾಟಕ

karnataka

ETV Bharat / state

ಸರಗಳ್ಳತನ ಮಾಡುತ್ತಿದ್ದ ಮೂವರ ಬಂಧನ: 13 ಲಕ್ಷ ವೌಲ್ಯದ ಚಿನ್ನದ ಸರ ವಶ

ನಗರದಲ್ಲಿ ಸರಣಿ ಕಳ್ಳತನ - ಮೂವರು ಆರೋಪಿಗಳ ಬಂಧನ - 13 ಲಕ್ಷ ರೂ.ವೌಲ್ಯದ 220 ಗ್ರಾಂ ತೂಕದ ಚಿನ್ನದ ಸರ ವಶಪಡಿಸಿಕೊಂಡ ಪೊಲೀಸರು

Arrest of three people who were doing robbery
ಸರಗಳ್ಳತನ ಮಾಡುತ್ತಿದ್ದ ಮೂವರ ಬಂಧನ: 13 ಲಕ್ಷ ವೌಲ್ಯದ ಚಿನ್ನದ ಸರ ವಶ.

By

Published : Feb 5, 2023, 10:06 PM IST

Updated : Feb 5, 2023, 10:22 PM IST

ಮೈಸೂರು: ನಗರದಲ್ಲಿ ಸರಣಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ 1.32 ಲಕ್ಷ ರೂ. ನಗದು ಹಾಗೂ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ನಗರದಲ್ಲಿ ಇತ್ತೀಚೆಗೆ ರೋಲಿಂಗ್ ಷೆಟರ್ಸ್‌ಗಳನ್ನು ಮೀಟಿ ಅಂಗಡಿಗಳ ಕಳವು ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ, ಇವುಗಳನ್ನು ಪತ್ತೆ ಮಾಡಲು ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ಫೆ.4ರಂದು ಮೈಸೂರಿನ ಎನ್​ಆರ್ ಮೊಹಲ್ಲಾದ ಫೌಂಟೇನ್ ವೃತ್ತದ ಬಳಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆ ಮಾಡಿದಾಗ ಹಾಲಿನ ಬೂತ್, ಮೆಡಿಕಲ್ ಶಾಪ್ ಮತ್ತು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.

ಆರೋಪಿಯಿಂದ 1,32,850 ರೂ ನಗದು, 10 ಲೀಟರ್ ನಂದಿನಿ ತುಪ್ಪ, 3 ಬಾಕ್ಸ್ ನಂದಿನಿ ಗುಡ್‌ಲೈಟ್ ಹಾಲು, 1 ಜೊತೆ ಬೆಳ್ಳಿ ಕಾಲುಗೆಜ್ಜೆ ಸೇರಿ ಒಟ್ಟು 1,52,000 ರೂ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್​ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಪತ್ತೆ ಕಾರ್ಯದಿಂದ ಸರಸ್ವತಿಪುರಂ 4, ವಿಜಯನಗರ 2, ನಜರ್‌ಬಾದ್, ಆಲನಹಳ್ಳಿಘಿ, ಕೆ.ಆರ್.ಠಾಣೆ, ಬೆಂಗಳೂರಿನ ಜಗಜೀವನ ನಗರ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ಸೇರಿದಂತೆ ಒಟ್ಟಾರೆ 10 ಕಳವು ಪ್ರಕರಣಗಳು ಪತ್ತೆಯಾಗಿವೆ. ಈತನ ವಿರುದ್ಧ ಬನ್ನೂರು ಠಾಣೆಯಲ್ಲಿ 6 ಪ್ರಕರಣ, ಗೊರೂರು 5, ಸೇರಿದಂತೆ ಒಟ್ಟಾರೆ 45 ಪ್ರಕರಣಗಳು ದಾಖಲಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಸರಗಳ್ಳರ ಬಂಧನ: ಗಂಗೋತ್ರಿಯ ಬಡಾವಣೆಯ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯವನ್ನು ಕಸಿದು ಪರಾರಿಯಾಗಿದ್ದ ಸರಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಸರಗಳ್ಳರಿಂದ 7 ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಲಕ್ಷ ರೂ.ವೌಲ್ಯದ 220 ಗ್ರಾಂ ತೂಕದ ಚಿನ್ನದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಂಗೋತ್ರಿ ಬಡಾವಣೆಯ ಮಹಿಳೆಯೊಬ್ಬರು ಜ.23ರಂದು ಮಾರುತಿ ಟೆಂಪಲ್ ಬಳಿಯಿರುವ ಲಾಯಲ್‌ವರ್ಲ್ಡ್‌ನಲ್ಲಿ ಸಾಮಗ್ರಿಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿರುವಾಗ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರಗಳ್ಳತನ ಮಾಡಿದ್ದರು.

ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸದ್ಯ ಪೊಲೀಸರು ಫೆ.1ರಂದು ಇಬ್ಬರು ಆರೋಪಿಯನ್ನು ಬಂಧಿಸಿದ್ದಾರೆ , ಈ ಆರೋಪಿತರು ನೀಡಿದ ಮಾಹಿತಿ ಮೇರೆಗೆ ಫೆ.2ರಂದು ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ. ಈ ಮೂವರು ಆರೋಪಿಗಳು ಮೈಸೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

7 ಸರಗಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ 13 ಲಕ್ಷ ರೂಪಾಯಿ ಬೆಲೆ ಬಾಳುವ 220 ಗ್ರಾಂ ತೂಕದ ಚಿನ್ನದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪತ್ತೆ ಕಾರ್ಯದಿಂದ ಸರಸ್ವತಿಪುರಂ ಪೊಲೀಸ್ ಠಾಣೆಯ 3, ವಿಜಯನಗರ ಪೊಲೀಸ್ ಠಾಣೆಯ 2, ವಿದ್ಯಾರಣ್ಯಪುರಂ ಠಾಣೆ ಹಾಗೂ ಹೆಬ್ಬಾಳ್ ಠಾಣೆಯ ತಲಾ ಒಂದೊಂದು ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.

ಇದನ್ನೂ ಓದಿ:ಚಿನ್ನಾಭರಣ ದೋಚಲು ಯತ್ನ; ದರೋಡೆಕೋರನ ಬೆರಳು ಕಚ್ಚಿ ಕತ್ತರಿಸಿದ ಮಹಿಳೆ!

Last Updated : Feb 5, 2023, 10:22 PM IST

ABOUT THE AUTHOR

...view details