ಮೈಸೂರು : ನಾಯಿಯನ್ನು ತಿಂದು ನೀರಿನ ಖಾಲಿ ಪೈಪ್ ಸೇರಿದ ಚಿರತೆಯನ್ನು ಗ್ರಾಮಸ್ಥರೇ ಕೂಡಿ ಹಾಕಿರುವ ಘಟನೆ ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಹಳೇ ರಾಮನಹಳ್ಳಿ ಬಳಿ ನಡೆದಿದೆ.
ನಾಯಿ ತಿಂದು ನೀರಿನ ಖಾಲಿ ಪೈಪ್ ಸೇರಿದ ಚಿರತೆ ಹಲವು ದಿನಗಳಿಂದ ಗ್ರಾಮದಲ್ಲಿ ಸಂಚರಿಸಿ ಗ್ರಾಮಸ್ಥರ ಎದೆನಡುಗಿಸಿದ್ದ ಚಿರತೆ, ಗ್ರಾಮಕ್ಕೆ ನುಗ್ಗಿ ಜಾನುವಾರುಗಳನ್ನ ಹೊತ್ತೊಯ್ದಿದ್ದಿತ್ತು.
ಇಂದು ನಾಯಿ ತಿಂದು ಹೋಗುವಾಗ ಜನರನ್ನು ಕಂಡು ಗಾಬರಿಯಿಂದ ಚಿರತೆ ಖಾಲಿ ಪೈಪ್ ಒಳಗೆ ಹೋಗಿದೆ. ಚಿರತೆ ಪೈಪ್ ಸೇರುತ್ತಿದ್ದಂತೆ ಗ್ರಾಮಸ್ಥರು ಪೈಪ್ ಸುತ್ತ ಸುತ್ತುವರೆದಿದ್ದಾರೆ.
ಚಿರತೆಯ ಅಪಾಯ ಅರಿತು ಪೈಪ್ ಮುಚ್ಚಿರುವ ಹಳೇ ರಾಮನಹಳ್ಳಿ ಗ್ರಾಮಸ್ಥರು, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಬಳಿಕವೂ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸದ ಹಿನ್ನೆಲೆ ಬೇಸರಗೊಂಡಿದ್ದಾರೆ.