ಮೈಸೂರು: ಶತಮಾನ ಕಂಡಿರುವ ಇಂದು ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವ ಸಮಾರಂಭ ವಿವಿಯ ಕ್ರಾಫರ್ಡ್ ಭವನದಲ್ಲಿ ನಡೆಯಿತು. ಇಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಇಬ್ಬರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಮೈಸೂರು ವಿವಿ 101ನೇ ಘಟಿಕೋತ್ಸವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೀವರಾಸಾಯನಶಾಸ್ತ್ರ ವಿಭಾಗದ ಗೌರವ ಪ್ರಾಧ್ಯಾಪಕ ಪದ್ಮಭೂಷಣ ಡಾ. ಗೋವಿಂದರಾಜನ್ ಪದ್ಮನಾಭನ್ ಮತ್ತು ರಾಜ್ಯ ಸರ್ಕಾರದ ವಿಷನ್ ಗ್ರೂಪ್ ಫಾರ್ ಸ್ಟಾರ್ಟ್ಅಪ್ಸ್ನ ಅಧ್ಯಕ್ಷರೂ ಆಗಿರುವ ಆಕ್ಸೆಲ್ ಇಂಡಿಯಾ ಸಂಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ವಿತರಿಸಲಾಯಿತು.
ನವದೆಹಲಿಯ ಸಿಎಸ್ಐಆರ್ನ ಮಹಾನಿರ್ದೇಶಕ ಹಾಗೂ ಡಿಎಸ್‌ಐಆರ್ ಕಾರ್ಯದರ್ಶಿ ಡಾ. ಶೇಖರ್ ಸಿ. ಮಂಡೆ ಅವರು ಘಟಿಕೋತ್ಸವ ಭಾಷಣ ಮಾಡಿದರು. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ, ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಉಪಸ್ಥಿತರಿದ್ದರು.
ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವ ಕಾರ್ಯಕ್ರಮ ಈ ಬಾರಿ 29,852 ಅಭ್ಯರ್ಥಿಗಳಿಗೆ ಪದವಿಯನ್ನು ಇಂದಿನ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು. ಇದರಲ್ಲಿ 20,118 ಮಂದಿ ಮಹಿಳೆಯರಿದ್ದರೆ, 9,734 ಪುರುಷರು ಇದ್ದಾರೆ. ವಿವಿಧ ಪದವಿ ಪಡೆದವರಲ್ಲಿ ಶೇ. 67.39 ಮಹಿಳೆಯರು ಮತ್ತು ಶೇ. 32.60 ಪುರುಷರು. ಪಿಎಚ್‌ಡಿ ಹೊರತುಪಡಿಸಿ ಎಲ್ಲ ವಿಭಾಗಗಳಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ.
244 ಅಭ್ಯರ್ಥಿಗಳಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ 98 ಮಂದಿ ಮಹಿಳೆಯರಿದ್ದರೆ, 146 ಪುರುಷರು. 216 ಅಭ್ಯರ್ಥಿಗಳು ಒಟ್ಟು 387 ಪದಕಗಳು ಮತ್ತು 178 ಬಹುಮಾನ ಪಡೆದುಕೊಂಡರು. ಈ ಪೈಕಿ 172 ಮಹಿಳೆಯರು ಮತ್ತು 44 ಪುರುಷರು.
ಮೈಸೂರು ವಿವಿ 101ನೇ ಘಟಿಕೋತ್ಸವ 7,143 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ 4,876 (ಶೇ. 68.26%) ಮಹಿಳೆಯರು, 2,267 (31.73%) ಪುರುಷರು ಇದ್ದಾರೆ.