ಮದ್ದೂರು(ಮಂಡ್ಯ) :ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿರುವ ಎಸ್ಬಿಐ ಬ್ಯಾಂಕಿಗೆ ಸೇರಿದ ಎಟಿಎಮ್ಗೆ ಕನ್ನ ಹಾಕಿರುವ ಖದೀಮರು ಗ್ಯಾಸ್ ಕಟ್ಟರ್ನಿಂದ ಎಟಿಎಂ ಯಂತ್ರ ಕತ್ತರಿಸಿ ಕಳ್ಳತನ ಮಾಡಿದ್ದಾರೆ. ಮದ್ದೂರಿನ ಕೆಎಸ್ಆರ್ಟಿಸಿ ಬಸ್ ಡಿಪೋ ಬಳಿ ಇರುವ ಎಸ್ಬಿಐ ಬ್ಯಾಂಕಿಗೆ ಸೇರಿದ ಎಟಿಎಮ್ ಇದಾಗಿದ್ದು, ಬರೋಬ್ಬರಿ 20 ಲಕ್ಷ ರೂಪಾಯಿ ಹಣ ಎಗರಿಸಿದ್ದಾರೆ.
ಮದ್ದೂರು : ಎಸ್ಬಿಐ ಬ್ಯಾಂಕಿಗೆ ಸೇರಿದ ಎಟಿಎಮ್ಗೆ ಕನ್ನ-20 ಲಕ್ಷ ರೂ. ದೋಚಿದ ಖದೀಮರು! - ಮಂಡ್ಯ ಕಳ್ಳತನ ಕೇಸ್
ಮದ್ದೂರಿನ ಕೆಎಸ್ಆರ್ಟಿಸಿ ಬಸ್ ಡಿಪೋ ಬಳಿ ಇರುವ ಎಸ್ಬಿಐ ಬ್ಯಾಂಕಿಗೆ ಸೇರಿದ ಎಟಿಎಮ್ನಲ್ಲಿ ಕಳ್ಳತನ ನಡೆದಿದೆ..
ಮದ್ದೂರು ಎಸ್ಬಿಐ ಎಟಿಎಮ್
ಇದನ್ನೂ ಓದಿ:ಹೊರಗೆ ಮಲಗಿದ್ದವರೇ ಟಾರ್ಗೆಟ್: ದಾವಣಗೆರೆಯಲ್ಲಿ ಹಲ್ಲೆ, ಹತ್ಯೆ ಮಾಡುತ್ತಿದ್ದ ಇಬ್ಬರು ಸೈಕೋಪಾತ್ಗಳು ಅಂದರ್
ಸೋಮವಾರ ತಡರಾತ್ರಿ ಎಟಿಎಂ ಕೇಂದ್ರಕ್ಕೆ ಕಾವಲುಗಾರ ಇಲ್ಲದನ್ನು ಗಮನಿಸಿದ ಆರೋಪಿಗಳು ಹೊಂಚು ಹಾಕಿ ಈ ಕೃತ್ಯ ನಡೆಸಿದ್ದಾರೆ. ಇಂದು ಸ್ಥಳಕ್ಕೆ ಮದ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.