ಮಂಡ್ಯ: ಮೈಶುಗರ್, ಪಿಎಸ್ಎಸ್‌ಕೆ ವ್ಯಾಪ್ತಿಯ ಕಬ್ಬು ಬೆಳೆಗಾರರಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಕಬ್ಬು ಕಟಾವು ನಡೆಯುತ್ತಿದೆಯಲ್ಲಾ ಎಂಬ ಖುಷಿಯಲ್ಲಿದ್ದ ರೈತರಿಗೆ ಕೋರಮಂಡಲ್ ಶುಗರ್ ಕಂಪನಿ ವ್ಯಾಪ್ತಿಯ ರೈತರು ಶಾಕ್ ನೀಡಿದ್ದು, ನಮ್ಮ ಕಬ್ಬು ಕಟಾವು ಮಾಡದೇ ಇತರೆ ವ್ಯಾಪ್ತಿಯ ಕಬ್ಬನ್ನು ನುರಿಯಬಾರದು ಎಂದು ಪ್ರತಿಭಟನೆ ನಡೆಸಿದ್ದಾರೆ.
ಕಬ್ಬು ಖರೀದಿಯಲ್ಲಿ ವಿಳಂಬ.. ಕೋರಮಂಡಲ್ ಶುಗರ್ ಕಂಪನಿ ವಿರುದ್ಧ ರೈತರ ಪ್ರತಿಭಟನೆ.. - ಮಂಡ್ಯದ ಕೆ.ಆರ್ ಪೇಟೆಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ
ನಮ್ಮ ಕಬ್ಬು ಕಟಾವಿಗೆ ಬಂದು ಅವಧಿ ಮೀರಿದರೂ ಕಟಾವು ಮಾಡುತ್ತಿಲ್ಲ. ಇತರೆಡೆಯಿಂದ ಕಬ್ಬು ತರಿಸಲಾಗುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು, ಕೆಆರ್‌ಪೇಟೆ ತಾಲೂಕಿನಲ್ಲಿರುವ ಕೋರಮಂಡಲ್ ಶುಗರ್ ಕಂಪನಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಕೆಆರ್‌ಪೇಟೆ ತಾಲೂಕಿನಲ್ಲಿರುವ ಕೋರಮಂಡಲ್ ಶುಗರ್ ಕಂಪನಿಗೆ ರೈತರು ಮುತ್ತಿಗೆ ಹಾಕಿ, ನಮ್ಮ ಕಬ್ಬು ಕಟಾವಿಗೆ ಬಂದು ಅವಧಿ ಮೀರಿದರೂ ಕಟಾವು ಮಾಡುತ್ತಿಲ್ಲ. ಇತರೆಡೆಯಿಂದ ಕಬ್ಬು ತರಿಸಲಾಗುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಕಂಪನಿ ಎದುರು ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದರು. ರೈತರಿಗೆ ಪರಿಸ್ಥಿತಿಯನ್ನು ತಿಳಿಸಲು ಅಧಿಕಾರಿಗಳು ಮುಂದಾದರೂ ಪ್ರಯೋಜನವಾಗಿಲ್ಲ. ಶೇ.90ರಷ್ಟು ಕಬ್ಬು, ಕಂಪನಿ ವ್ಯಾಪ್ತಿಯದ್ದೇ ಆಗಿದೆ. ಉಳಿದ ಶೇ.10ರಷ್ಟು ಮಾತ್ರ ಹೊರ ಭಾಗದಿಂದ ತರಲಾಗುತ್ತಿದೆ ಎಂದು ಮಾಹಿತಿ ನೀಡಿದರು. ರೈತರು ಶೇ.100ರಷ್ಟು ಕಬ್ಬನ್ನು ನಮ್ಮದೇ ಅರೆದು, ಕಟಾವು ಮುಗಿದ ಮೇಲೆ ಬೇರೆ ಕಡೆಯಿಂದ ತಂದು ಅರೆಯುವಂತೆ ಪಟ್ಟು ಹಿಡಿದರು.
ಕೊನೆಗೆ ರೈತರು ಅಧಿಕಾರಿಗಳ ಮಾತಿಗೆ ಮಣಿದರೂ, ಅವಧಿ ಮೀರಿದ ಕಬ್ಬನ್ನು ತಕ್ಷಣ ಅರೆಯಲು ಕ್ರಮವಹಿಸಬೇಕು. ಇಲ್ಲವಾದರೆ ಮತ್ತೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ತೆರಳಿದರು.