ಕರ್ನಾಟಕ

karnataka

ETV Bharat / state

ಶ್ರೀರಂಗಪಟ್ಟಣದಲ್ಲಿ ಬೀದಿ ನಾಯಿ ಹಾವಳಿ.. ಗಾಯಗೊಂಡ 15ಕ್ಕೂ ಹೆಚ್ಚು ಮಂದಿ.. - Street dog problem

ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ ಕ್ರಮ‌ಕೈಗೊಳ್ಳದ ಪುರಸಭೆ ಅಧಿಕಾರಿಗಳ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಬೀದಿ ನಾಯಿಗಳನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ‌..

Street dog problem in Srirangapattana
ಶ್ರೀರಂಗಪಟ್ಟಣದಲ್ಲಿ ಬೀದಿ ನಾಯಿ ಹಾವಳಿ

By

Published : Oct 2, 2021, 6:37 PM IST

ಮಂಡ್ಯ: ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಗಂಜಾಮ್​ನಲ್ಲಿ ಬೀದಿ ನಾಯಿಯೊಂದು ಐವರು ಬಾಲಕರು ಸೇರಿ 15ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ.

ಗಂಜಾಮ್ ರಾಮಮಂದಿರ, ಬುಸಿಗೌಡ ಸರ್ಕಲ್, ಡೈರಿಗೆ ಬಂದ ಬಾಲಕರಿಗೆ ಕಚ್ಚಿ ಎಳೆದಾಡಿದೆ. ಈ ವೇಳೆ ಬಿಡಿಸಲು ಹೋದ ಹಲವರಿಗೆ ಈ ನಾಯಿ ದಾಳಿ ನಡೆಸಿ ಕಚ್ಚಿದೆ. 15ಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿದ ಸುದ್ದಿ ತಿಳಿದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಶ್ರೀರಂಗಪಟ್ಟಣದಲ್ಲಿ ಬೀದಿ ನಾಯಿ ಹಾವಳಿ..

ಇದನ್ನೂ ಓದಿ:ನಾಳೆ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಉಪಚುನಾವಣೆ ಉಸ್ತುವಾರಿಗಳ ನೇಮಕ : ಸಿಎಂ ಬೊಮ್ಮಾಯಿ

ಸದ್ಯ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ ಕ್ರಮ‌ಕೈಗೊಳ್ಳದ ಪುರಸಭೆ ಅಧಿಕಾರಿಗಳ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಬೀದಿ ನಾಯಿಗಳನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ‌.

ABOUT THE AUTHOR

...view details