ಮಂಡ್ಯ:ಜಿಲ್ಲೆಯಲ್ಲಿ ಮತ್ತೊಂದು ಹತ್ಯೆಯಾಗಿದ್ದು, ತನ್ನ ತಾಯಿಯ ಮೇಲೆ ಹಲ್ಲೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಮಗ ತಂದೆಯನ್ನೇ ಇರುದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಪ್ರತಿನಿತ್ಯ ಕುಡಿದು ಬಂದು ತಾಯಿ ಮೇಲೆ ಹಲ್ಲೆ: ಬೇಸತ್ತ ಮಗನಿಂದ ತಂದೆಯ ಕೊಲೆ - murder of a father
ಪ್ರತಿನಿತ್ಯ ಕುಡಿದು ಬಂದು ತನ್ನ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತ ಮಗ ತಾಯಿಗೋಸ್ಕರ ತಂದೆಗೆ ಚೂರಿ ಇರಿದಿದ್ದಾನೆ.
ತಂದೆಯ ಕೊಲೆ
ದೇವರಾಜು(40) ಮಗನಿಂದ ಕೊಲೆಯಾದ ತಂದೆ. ಈತ ಪ್ರತಿನಿತ್ಯ ಕುಡಿದು ಬಂದು ತನ್ನ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತ ಮಗ ತಾಯಿಗೋಸ್ಕರ ತಂದೆಗೆ ಚೂರಿ ಇರಿದಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ದೇವರಾಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.