ಮಂಡ್ಯ: ನಗರದ ಗುತ್ತಲು ಬಡಾವಣೆಯ ಕಾಳಿಕಾಂಬ ದೇವಾಲಯದ ಗರ್ಭಗುಡಿಯಲ್ಲೇ ರೌಡಿಶೀಟರ್ ಮೇಲೆ ದಾಳಿ ಮಾಡಿ, ಕೊಚ್ಚಿ ಕೊಲೆಗೈದ ಘಟನೆ ಶುಕ್ರವಾರ ರಾತ್ರಿ 8.30ರ ಸುಮಾರಿಗೆ ನಡೆದಿದೆ.
ಮಂಡ್ಯ: ದೇವಾಲಯದ ಗರ್ಭಗುಡಿಯಲ್ಲೇ ರೌಡಿಶೀಟರ್ ಮೇಲೆ ಅಟ್ಯಾಕ್... ಕೊಚ್ಚಿ ಕೊಲೆ! - ಗರ್ಭಗುಡಿಯಲ್ಲೇ ಕೊಲೆ
ಹಳೆ ದ್ವೇಷದ ಹಿನ್ನೆಲೆ ರೌಡಿಶೀಟರ್ ಮೇಲೆ ಇನ್ನೊಂದು ಗ್ಯಾಂಗ್ ಅಟ್ಯಾಕ್. ಪೂಜೆಗೆಂದು ಬಂದಿದ್ದ ರೌಡಿಶೀಟರ್ ನಂದನ್ ಹತ್ಯೆ. ಪ್ರಾಣಾಪಾಯದಿಂದ ಈತನ ಸ್ನೇಹಿತ ಶರತ್ ಪಾರು.
ನಗರದ ಚನ್ನಯ್ಯ ಬಡಾವಣೆಯ ನಿವಾಸಿ ನಂದನ್ (26) ಕೊಲೆಯಾದ ರೌಡಿಶೀಟರ್. ದೇವಸ್ಥಾನಕ್ಕೆ ಪೊಜೆಗೆಂದು ಬಂದಿದ್ದ ನಂದನ್ ಮೇಲೆ ಐದಾರು ಜನರ ತಂಡ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ. ಹಳೆ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದೆ.
ನಂದನ್ ಜೊತೆಯಲ್ಲಿದ್ದ ಸ್ನೇಹಿತ ಶರತ್ ಮೇಲೂ ಅಟ್ಯಾಕ್ ಮಾಡಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹತ್ಯೆಗೀಡಾದ ನಂದನ್ ಮೇಲೆ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ಕೊಲೆ, ಕೊಲೆಯತ್ನ, ದರೋಡೆ ಪ್ರಕರಣ ದಾಖಲಾಗಿದ್ದವು ಎಂದು ಹೇಳಲಾಗಿದೆ. ಸ್ಥಳಕ್ಕೆ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.