ಮಂಡ್ಯ:ನಾನು ಅಂಬರೀಶ್ ಪತ್ನಿ. ಕೊಟ್ಟ ಮಾತು ತಪ್ಪೋದಿಲ್ಲ. ಇಲ್ಲಿ ನಡೆಯುವ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಭರವಸೆ ನೀಡಿದ್ದಾರೆ.
ನಾನು ಅಂಬಿ ಪತ್ನಿ, ಕೊಟ್ಟ ಮಾತು ತಪ್ಪೋದಿಲ್ಲ: ಸಂಸದೆ ಸುಮಲತಾ - ಗಣಿಗಾರಿಕೆ ವಿರುದ್ಧ ಹೋರಾಟ
ನಾನು ಅಂಬರೀಶ್ ಪತ್ನಿ. ಕೊಟ್ಟ ಮಾತಿಗೆ ತಪ್ಪೋದಿಲ್ಲ. ಇಲ್ಲಿ ನಡೆಯುವ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಭರವಸೆ ನೀಡಿದ್ದಾರೆ.
ಇಂದು ಪಾಂಡವಪುರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜನತೆ ನನಗೆ ಬೆಂಬಲ ನೀಡಿದ್ದಾರೆ. ನಿಮ್ಮ ಋಣ ನನ್ನ ಮೇಲಿದೆ. ಅಕ್ರಮ ಗಣಿಗಾರಿಕೆಯಿಂದ ತೊಂದರೆ ಅನುಭವಿಸುತ್ತಿದ್ದೀರ. ಈ ಬಗ್ಗೆ ಲೋಕಸಭೆ ಅಧಿವೇಶನದಲ್ಲೂ ಗಮನ ಸೆಳೆದಿದ್ದೇನೆ ಎಂದು ಹೇಳಿದರು.
ಅಂಬರೀಶ್ ನಡೆದ ದಾರಿಯಲ್ಲಿ ನಡೆಯುವೆ. ನನ್ನೊಂದಿಗೆ ನೀವೆಲ್ಲರೂ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಬೇಕು. ಜಿಲ್ಲೆಯ ಅಭಿವೃದ್ಧಿಗೆ ಶ‍್ರಮಿಸುವೆ. ಕ್ಷೇತ್ರದಲ್ಲಿ ರೈತ ಸಂಘ ಹಾಗೂ ಬಿಜೆಪಿ ಕಾರ್ಯಕರ್ತರು ನನ್ನ ಬೆಂಬಲಕ್ಕೆ ನಿಂತಿದ್ದರು. ನಾನು ನಿಮಗೆಲ್ಲ ಚಿರಋಣಿ ಎಂದರು. ಸಭೆಯಲ್ಲಿ ರೈತ ಮುಖಂಡರು ಸೇರಿದಂತೆ ಹಲವು ಹೋರಾಟಗಾರರು ಭಾಗವಹಿಸಿದ್ದರು.