ಕರ್ನಾಟಕ

karnataka

ETV Bharat / state

ಕೊರೊನಾ ರೂಲ್ಸ್​ಗೆ ಡೋಂಟ್​ ಕೇರ್​: ಮಾಂಸ ಖರೀದಿಗೆ ಮುಗಿಬಿದ್ದ ಮಂಡ್ಯ ಜನತೆ - ಮಂಡ್ಯ ಜಿಲ್ಲಾಡಳಿತ

ಮಂಡ್ಯದಲ್ಲಿ ಕೊರೊನಾ ಕೇಸ್​ ಹೆಚ್ಚಾಗುತ್ತಿದೆ. ಆದರೆ ಜನರು ಮುಂಜಾಗ್ರತಾ ಕ್ರಮಗಳಿಗೆ ಕ್ಯಾರೇ ಎನ್ನುತ್ತಿಲ್ಲ. ಎಂದಿನಂತೆ ಮಾಂಸ ಖರೀದಿ, ದಿನಸಿ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ.

mandya
ಕೊರೊನಾ ರೂಲ್ಸ್​ಗೆ ಡೋಂಟ್​ಕೇರ್​

By

Published : May 16, 2021, 11:04 AM IST

ಮಂಡ್ಯ:ಸಕ್ಕರೆ ನಾಡಿದಲ್ಲಿ‌ ಒಂದೆಡೆ ದಿನೇ ದಿನೆ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದೆ. ಮತ್ತೊಂದು ಕಡೆ ಸೋಂಕಿತರ ಸಾವಿನ ಸಂಖ್ಯೆ ಏರಿಕೆಯಾಗ್ತಿದೆ. ಆದರೂ ಜನತೆ ಬುದ್ಧಿ ಕಲಿಯದೆ ಮೀನು-ಮಾಂಸ ಖರೀದಿಯಲ್ಲಿ ತೊಡಗಿದ್ದಾರೆ.

ಮಂಡ್ಯದ ಹೊಸಹಳ್ಳಿ ಬಳಿ ಇರುವ ಮೀನು ಮಾರುಕಟ್ಟೆಯಲ್ಲಿ ಮಾಸ್ಕ್, ಸಾಮಾಜಿಕ ಅಂತರ ಮರೆತು ಮೀನು‌, ಮಾಂಸ ಕೊಳ್ಳಲು ಜನರು ಕ್ಯೂ ನಿಂತಿದ್ದಾರೆ. ಆದರೆ ಸ್ಥಳೀಯ ನಗರಸಭೆ ಅಧಿಕಾರಿಗಳಾಗಲಿ‌, ಪೊಲೀಸ್ ಇಲಾಖೆಯವರಾಗಲಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಇನ್ನು ಈ ಮೀನು ಮಾರುಕಟ್ಟೆ ಕೊರೊನಾ ಹಾಟ್ ಸ್ಪಾಟ್ ಆಗ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಮತ್ತು ಈ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ‌.

ಕೊರೊನಾ ರೂಲ್ಸ್​ಗೆ ಡೋಂಟ್ ​ಕೇರ್​

ದಿನಸಿ, ತರಕಾರಿ ಖರೀದಿ ವೇಳೆಯೂ ಸಾಮಾಜಿಕ ಅಂತರ ಮಾಯವಾಗಿದ್ದು, ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಜನರ ಸಂಚಾರ ಹೆಚ್ಚಾಗಿದೆ. ಬೈಕ್​ಗಳಲ್ಲಿ ಬಂದು ಅಗತ್ಯ ವಸ್ತುಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ. ಇನ್ನು ಕೆಲವೆಡೆ ಪೊಲೀಸರು ಗುಂಪು ಚದುರಿಸಿ, ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details