ಕರ್ನಾಟಕ

karnataka

ETV Bharat / state

ಒಣ ಭೂಮಿಗೆ ಸಂಜೀವಿನಿಯಾದ ಮಂಜೇಗೌಡರ ಹೊಸ ಆವಿಷ್ಕಾರ..  ಅವರ ಆ ಸಂಶೋಧನೆ ಹೀಗಿದೆ ನೋಡಿ!

ಸಕ್ಕರೆ ಜಿಲ್ಲೆಯ ರೋಬೋ ಎಂದು ಕರೆಸಿಕೊಳ್ಳುವ ಮಂಜೇಗೌಡ ರೈತರ ನೆರವಿಗಾಗಿ ಹೊಸ ಆವಿಷ್ಕಾರವೊಂದನ್ನು ಕಂಡು ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ.

By

Published : May 14, 2019, 2:15 PM IST

ಹೊಸ ಹೊಸ ಯಂತ್ರಗಳನ್ನು ಆವಿಷ್ಕಾರ ಮಾಡುವ ಮೂಲಕ ರೈತರ ಗಮನ ಸೆಳೆದ ಮಂಜೇಗೌಡ

ಮಂಡ್ಯ:ಒಂದಲ್ಲಾ ಒಂದು ಆವಿಷ್ಕಾರ ಮಾಡುತ್ತಲೇ ಚಿರಪರಿಚಿತರಾದ ಸಕ್ಕರೆ ಜಿಲ್ಲೆಯ ರೋಬೋ ಎಂಬ ಖ್ಯಾತಿ ಗಳಿಸಿರುವ ಮಂಜೇಗೌಡ ಇದೀಗ ಹೊಸ ಹೊಸ ಯಂತ್ರಗಳನ್ನು ಆವಿಷ್ಕಾರ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇಂತಹ ನೂತನ ಯಂತ್ರಗಳ ಆವಿಷ್ಕಾರದಿಂದಲೇ ಇದೀಗ ರೈತರ ಗಮನ ಸೆಳೆಯುತ್ತಿದ್ದಾರೆ.

ಮಿತ ನೀರಿನ ಬಳಕೆ ಮೂಲಕ ವ್ಯವಸಾಯ ಮಾಡಬಹುದಾದ ತಂತ್ರಜ್ಞಾನವೊಂದನ್ನು ಇವರು ಆವಿಷ್ಕಾರ ಮಾಡಿದ್ದಾರೆ. ಈ ಹೊಸ ಸಂಶೋಧನೆಯನ್ನು ತಮ್ಮ ತೋಟಕ್ಕೆ ಅಳವಡಿಸುವ ಮೂಲಕ ರೈತರಿಗೆ ಪ್ರಾತ್ಯಕ್ಷಿಕೆ ನೀಡಿ ಗಮನ ಸೆಳೆದಿದ್ದಾರೆ. ಮಿತವಾಗಿ ನೀರು ಬಳಕೆ ಮೂಲಕ ವ್ಯವಸಾಯ ಮಾಡಲು ಹೊಸ ಆವಿಷ್ಕಾರ ಮಾಡಿದ್ದು, ಇದಕ್ಕೆ ವಾಟರ್ ಮ್ಯಾನೇಜ್​​ಮೆಂಟ್ ಸಿಸ್ಟಂ ಎಂದು ಹೆಸರಿಟ್ಟು ಪ್ರಯೋಗಕ್ಕೆ ಮುಂದಾಗಿದ್ದಾರೆ. ಸ್ಥಳೀಯವಾಗಿ ಸಿಗುವ ಹಳೆಯ ಯಂತ್ರಗಳು, ಪರಿಕರಗಳನ್ನು ಉಪಯೋಗಿಸಿ ಯೋಜನೆ ರೂಪಿಸಿದ್ದು, ತಮ್ಮ ತೋಟಕ್ಕೆ ಅಳವಡಿಸಿಕೊಂಡಿದ್ದಾರೆ.

ಹೊಸ ಹೊಸ ಯಂತ್ರಗಳನ್ನು ಆವಿಷ್ಕಾರ ಮಾಡುವ ಮೂಲಕ ರೈತರ ಗಮನ ಸೆಳೆದ ಮಂಜೇಗೌಡ

ಆವಿಷ್ಕಾರ ಮಾಡಿರುವ ಯಂತ್ರವನ್ನು ಹನಿ ನೀರಾವರಿ ಪೈಪ್​​ಗಳಿಗೆ ಜೋಡಣೆ ಮಾಡಿದರೆ ಅವಶ್ಯಕತೆಗೆ ತಕ್ಕಂತೆ ನೀರಿನ ಸರಬರಾಜು ಆಗುತ್ತದೆ. ಭೂಮಿಯ ತೇವಾಂಶದ ಅನುಸಾರವಾಗಿ ನೀರಿನ ಸರಬರಾಜು ಆಗುವ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಕೆ ಮಾಡಲಾಗಿದೆ. ಆ ನೀರಿನ ನಿರ್ವಹಣೆ ಮೂಲಕ ಸಮರ್ಪಕವಾಗಿ ಬೆಳೆ ರಕ್ಷಣೆ ಮಾಡಬಹುದು ಎನ್ನುತ್ತಾರೆ ಮಂಜೇಗೌಡ.

ಇನ್ನು ಮಂಜೇಗೌಡರ ತಂತ್ರಜ್ಞಾನ ವೀಕ್ಷಣೆಗೆ ಹಲವು ಕಡೆಯಿಂದ ರೈತರು ಆಗಮಿಸುತ್ತಿದ್ದಾರೆ. ಹೊಸ ಆವಿಷ್ಕಾರಕ್ಕೆ ಮಾರು ಹೋಗಿರುವ ರೈತರು, ತಮ್ಮ ಜಮೀನಿಗೂ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಹೊಸ ತಂತ್ರಜ್ಞಾನ ಹೆಚ್ಚಿನ ಭೂಮಿಗೆ ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ.

ಮಂಜೇಗೌಡರ ಯತ್ನಕ್ಕೆ ಕೃಷಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಆವಿಷ್ಕಾರ ಮಾಡಿ ರೈತರ ಸಹಾಯಕ್ಕೆ ನಿಲ್ಲುವಂತೆ ಸಲಹೆಗಳು ಸಹ ಕೇಳಿ ಬಂದಿವೆ.

ABOUT THE AUTHOR

...view details