ಕರ್ನಾಟಕ

karnataka

ಲಾಕ್​ಡೌನ್​​ ಸಂಕಷ್ಟದ ಮಧ್ಯೆ ರೈತರ ಚಿನ್ನ ಹರಾಜು, ಬ್ಯಾಂಕ್ ಮುಂದೆ ಪ್ರತಿಭಟನೆ

By

Published : Jul 1, 2020, 1:48 PM IST

ಮಂಡ್ಯ ತಾಲ್ಲೂಕಿನ ಬೂತನ ಹೊಸೂರು ಗ್ರಾಮದ ಬರೊಡಾ ಬ್ಯಾಂಕ್, ರೈತರು ಗಿರವಿ ಇಟ್ಟಿದ್ದ ಚಿನ್ನದ ಆಭರಣಗಳನ್ನು ಹರಾಜು ಹಾಕಿ ಕೇಂದ್ರ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದೆ ಎಂಬ ಆರೋಪ ಕೇಳಿ ಬಂದಿದೆ.

Mandya farmers protest against bank
ಬ್ಯಾಂಕ್ ಮುಂದೆ ಪ್ರತಿಭಟನೆ

ಮಂಡ್ಯ: ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಸದ್ದಿಲ್ಲದೇ ರೈತರ ಗಿರವಿ ಆಭರಣಗಳನ್ನು ಹರಾಜು ಹಾಕುತ್ತಿವೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.

ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ
ಮಂಡ್ಯ ತಾಲ್ಲೂಕಿನ ಬೂತನ ಹೊಸೂರು ಗ್ರಾಮದ ಬರೊಡಾ ಬ್ಯಾಂಕ್ ಸಿಬ್ಬಂದಿ ರೈತರು ಗಿರವಿ ಇಟ್ಟಿದ್ದ ಚಿನ್ನದ ಆಭರಣಗಳನ್ನು ಹರಾಜು ಹಾಕಿ, ಕೇಂದ್ರ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿರುವ ರೈತರು ಬ್ಯಾಂಕ್ ಮುಂದೆ ಧರಣಿ ನಡೆಸುತ್ತಿದ್ದಾರೆ.
ರೈತರ ಚಿನ್ನಾಭರಣಗಳನ್ನು ಕಾನೂನಾತ್ಮಕವಾಗಿಯೇ ಹರಾಜು ಹಾಕಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ದಿನ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಹರಾಜು ಹಾಕಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಕೇಂದ್ರ ಸರ್ಕಾರವೇ‌ ಸಾಲ ಮರುಪಾವತಿಗೆ ನಿಯಮ ಸಡಿಲಿಸಿದ್ದು, ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ABOUT THE AUTHOR

...view details