ಕರ್ನಾಟಕ

karnataka

ETV Bharat / state

ಮೇಲುಕೋಟೆ ಜಾತ್ರೆಯಲ್ಲಿ ಹೆಜ್ಜೇನು ದಾಳಿ: ಹಲವರು ಅಸ್ವಸ್ಥ, 30ಕ್ಕೂ ಹೆಚ್ಚು ಜನರಿಗೆ ಗಾಯ - ಈಟಿವಿ ಭಾರತ ಕರ್ನಾಟಕ

ಹೆಜ್ಜೇನು ದಾಳಿಯಿಂದ ಹಲವರು ಅಸ್ವಸ್ಥರಾಗಿ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮೇಲುಕೋಟೆಯಲ್ಲಿ ನಡೆದಿದೆ.

Etv Bharathoney-bee-attack-on-devotees-in-melukote-jathare
ಮೇಲುಕೋಟೆ ಜಾತ್ರೆಯಲ್ಲಿ ಹೆಜ್ಜೇನು ದಾಳಿ: ಹಲವರು ಅಸ್ವಸ್ಥ, 30ಕ್ಕೂ ಹೆಚ್ಚು ಜನರಿಗೆ ಗಾಯ

By ETV Bharat Karnataka Team

Published : Nov 22, 2023, 6:40 PM IST

ಮಂಡ್ಯ:ಮೇಲುಕೋಟೆಯ ತೊಟ್ಟಿಲುಮಡು ಜಾತ್ರೆಯ ವೇಳೆ ಹೆಜ್ಜೇನು ದಾಳಿಯಿಂದ 10ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ತೊಟ್ಟಿಲುಮಡು ಜಾತ್ರೆಯ ಅಷ್ಟತೀರ್ಥೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ, ಭಕ್ತರು ಜೇನುಗೂಡಿದ್ದ ಮರದ ಬಳಿಯೇ ಕರ್ಪೂರ ಹಚ್ಚಿದ್ದಾರೆ. ಕರ್ಪೂರದ ಹೊಗೆಯಿಂದ ಎದ್ದ ಜೇನುನೋಣಗಳು ಭಕ್ತರ ಮೇಲೆ ದಾಳಿ ಮಾಡಿವೆ. ಇದರಿಂದ ಭಕ್ತರು ದಿಕ್ಕಾಪಾಲಾಗಿ ಓಡಿದ್ದಾರೆ. ಹೆಜ್ಜೇನು ದಾಳಿಗೊಳಗಾದವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ:ಕಲ್ಲಕ್ಕಿ ಎಸ್ಟೇಟ್​ನಲ್ಲಿ ಕೂಲಿ ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ

ನಾಮಕರಣ ಕಾರ್ಯಕ್ರಮಕ್ಕೆ ಬಂದಿದ್ದವರ ಮೇಲೆ ಹೆಜ್ಜೇನು ದಾಳಿ:ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲೆ ಹೆಜ್ಜೇನು ದಾಳಿ ಮಾಡಿದ್ದ ಪರಿಣಾಮ ಓರ್ವ ಮೃತಪಟ್ಟು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿ ಗೇಟ್ ಬಳಿ ನಿನ್ನೆ ನಡೆದಿತ್ತು. ನಾಮಕರಣ ಕಾರ್ಯಕ್ರಮ ಗ್ರಾಮದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಹೆಜ್ಜೇನು ದಿಢೀರ್​ ದಾಳಿ ಮಾಡಿದ್ದವು. 47 ವರ್ಷದ ವೀರಭದ್ರಯ್ಯ ಎಂಬುವರು ಹೆಜ್ಜೇನು ದಾಳಿಯಿಂದ ಅಸ್ವಸ್ಥರಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ಹೆಜ್ಜೇನು ದಾಳಿಗೊಳಗಾದವರಿಗೆ ಗುಬ್ಬಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಮಕರಣ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಸಮೀಪದ ಮರದಿಂದ ಹೆಜ್ಜೇನು ಎದ್ದಿವೆ. ಇದನ್ನು ಗಮನಿಸಿದ ಜನರು ದೇವಸ್ಥಾನದ ಒಳಗೆ ಸೇರಿಕೊಂಡು ಬಾಗಿಲು ಹಾಕಿಕೊಂಡಿದ್ದರು. ಸುಮಾರು ಒಂದು ಗಂಟೆ ಕಳೆದ ನಂತರ ಹೊರಗೆ ಬಂದ ಜನರ ಮೇಲೆ ಜೇನುನೊಣಗಳು ದಾಳಿ ಮಾಡಿದ್ದವು. ಇದರಿಂದಾಗಿ ಜನರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದರು.

ಹೆಜ್ಜೇನು ದಾಳಿಗೆ ವ್ಯಕ್ತಿ ಸಾವು: ಇತ್ತೀಚಿಗೆ, ಶವಸಂಸ್ಕಾರಕ್ಕೆ ತೆರಳಿದ್ದ ವೇಳೆ ಸ್ಮಶಾನದ ಮರವೊಂದರಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ದಾಳಿ ನಡೆಸಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದ ಘಟನೆ ಚಾಮರಾಜನಗರದ ಹನೂರು ತಾಲೂಕಿನ ಕೊಂಗರಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ಚೆನ್ನಪ್ಪ (60) ಸಾವಿಗೀಡಾದ್ದರು. ಹೆಜ್ಜೇನು ದಾಳಿಗೆ 14 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ABOUT THE AUTHOR

...view details