ಮಂಡ್ಯ:ಒಂದು ವರ್ಷದಿಂದ ವೇತನವಿಲ್ಲದೆ ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸಲು ಸಾಧ್ಯವಾಗದ ಕಾರಣ ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅರೆಕಾಲಿಕ ಗ್ರೂಪ್ ಡಿ ನೌಕರೆ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ನಡೆದಿದೆ.
ಮದ್ದೂರಿನಲ್ಲಿ ಅರೆಕಾಲಿಕ ಗ್ರೂಪ್ ಡಿ ನೌಕರೆ ಆತ್ಮಹತ್ಯೆಗೆ ಯತ್ನ - ಅರೆಕಾಲಿಕ ಗ್ರೂಪ್ ಡಿ ನೌಕರೆ
ಒಂದು ವರ್ಷದಿಂದ ವೇತನವಿಲ್ಲದೆ ಮಕ್ಕಳಿಗೆ ಶಾಲೆಯ ಫೀಸ್ ಕಟ್ಟಲೂ ಹಣವಿಲ್ಲ ಅಂತಾ ಅರೆಕಾಲಿಕ ಗ್ರೂಪ್ ಡಿ ನೌಕರೆ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ.
ಆತ್ಮಹತ್ಯೆ
ಇಂದುಮತಿ ಎಂಬ ನೌಕರೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಬಳ ಕೊಡಲು ಇಂದು, ನಾಳೆ ಅಂತಾ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಶಾಲೆಯ ಫೀಸ್ ಕಟ್ಟಲೂ ಹಣವಿಲ್ಲ ಅಂತಾ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳು ಇನ್ನಾದರೂ ಹೆಚ್ಚೆತ್ತು ಡಿ ಗ್ರೂಪ್ ನೌಕರರ ಸಂಬಳ ಬಿಡುಗಡೆ ಮಾಡುವಂತೆ ಇಂದುಮತಿ ಕುಟುಂಬದವರು ಮನವಿ ಮಾಡಿದ್ದಾರೆ.